»   »  ಸಿಂಹನ ಬದಲು ಸಿನಿಮಾ ನೋಡಲಿರುವ ಕೇಸರಿ

ಸಿಂಹನ ಬದಲು ಸಿನಿಮಾ ನೋಡಲಿರುವ ಕೇಸರಿ

Subscribe to Filmibeat Kannada
Kesari haravoo
ಭೂಮಿಗೀತ ಎಂಬ ಅರ್ಥಪೂರ್ಣ ಚಿತ್ರ ನಿರ್ದೇಶಿಸಿ ರಾಜ್ಯ ಹಾಗೂ ರಾಷ್ಟ್ಟ್ರಮಟ್ಟದಲ್ಲಿ ಹೆಸರು ಗಳಿಸಿದ ಕೇಸರಿ ಹರವೂ ಅವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಸಿಕ್ಕಿದೆ. 2007 ರಿಂದ 2008 ರವರೆಗೂ ಪ್ರದರ್ಶನಗೊಂಡ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಹೊಣೆಯನ್ನು ಹರವೂ ಅವರ ನೇತೃತ್ವದ ತಂಡ ವಹಿಸಿಕೊಂಡಿದೆ.

ಪ್ರಶಸ್ತಿಗೆ ನಾಮಾಂಕಿತವಾಗಿರುವ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರದಲ್ಲಿ ನಟಿಸಿರುವ ಕಾರಣ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಕೂರಲಾರೆ ಎಂದು ಹೇಳಿ ಸಿ.ಆರ್ ಸಿಂಹ ಅವರು ಹೊರನಡೆದ ಪರಿಣಾಮ, ಕೇಸರಿ ಅವರು ಈ ಸ್ಥಾನವನ್ನು ತುಂಬಲಿದ್ದಾರೆ.ಸಿಆರ್ ಸಿಂಹ ಅವರ ಜೊತೆಗೆ ಆಯ್ಕೆ ಸಮಿತಿಯಲ್ಲಿದ್ದ ಸಂಕೇತ್ ಕಾಶಿ ಕೂಡ ಇದೇ ಕಾರಣ ನೀಡಿ ಸಮಿತಿಯಿಂದ ಹೊರ ಬಂದಿದ್ದರು.

ನಿರ್ದೇಶಕ ಅನಂದ್ ರಾಜು,ನಿರ್ಮಾಪಕ ವಿಜಯಕುಮಾರ್, ಪತ್ರಕರ್ತ ಕೆ ಎಸ್ ವಾಸು, ಗಾಯಕಿ ರತ್ನಮಾಲಾ ಪ್ರಕಾಶ್ ,ಛಾಯಾಗ್ರಾಹಕ ಅಶೋಕ ನಾಯ್ಡು, ರಂಗನಟಿ ಮಾಲತಿ ಸುಧೀರ್ , ವಾರ್ತಾ ಇಲಾಖೆಯ ವಿಶು ಕುಮಾರ್ ಅವರು ಆಯ್ಕೆ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ.

ಭೂಮಿಗೀತ ನಂತರ ಚಲನಚಿತ್ರ ನಿರ್ದೇಶನದತ್ತ ಹೊರಳದೆ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ ಕೇಸರಿ ಅವರು, ಅಘನಾಶಿನಿ, ಸರೋಜಿನಿ,ಮುಂತಾದ ಸಾಕ್ಷ್ಯಚಿತ್ರಗಳನ್ನು ರೂಪಿಸಿದರು. ಬಿ. ವಿಜಯ್ ರೆಡ್ಡಿ, ಡಿ .ರಾಜೇಂದ್ರ ಬಾಬು ಹಾಗೂ ವಿ. ರವಿಚಂದ್ರನ್ ಮುಂತಾದ ಹಿರಿಯ ನಿರ್ದೇಶಕರ ಜೊತೆ ಚಿತ್ರಕಥೆಗಾರರಾಗಿ, ಸಹಾಯಕರಾಗಿ ಹರವೂ ಅವರು ದುಡಿದಿದ್ದಾರೆ.
(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada