»   » ರಾಗಿಣಿ ಜೊತೆ ಬಿಎಂಎಸ್ ಕಾಲೇಜಿಗೆ ಕಿಚ್ಚ ಸುದೀಪ್

ರಾಗಿಣಿ ಜೊತೆ ಬಿಎಂಎಸ್ ಕಾಲೇಜಿಗೆ ಕಿಚ್ಚ ಸುದೀಪ್

Posted By:
Subscribe to Filmibeat Kannada
Sudeep
ಕಿಚ್ಚ ಸುದೀಪ್ ಸದ್ದು ಇದೀಗ ಕರ್ನಾಟಕವನ್ನು ಮೀರಿ ಇಡೀ ಸೌತ್ ಇಂಡಿಯಾ ಫುಲ್ ವ್ಯಾಪಿಸಿದೆ. ಇದೇ ಸಮಯದಲ್ಲಿ ಕಿಚ್ಚ ಬಿಎಂಎಸ್ ಕಾಲೇಜಿನಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಅದೂ ನಟಿ ರಾಗಿಣಿ ಹಾಗೀ ಸಂಗೀತ ನಿರ್ದೇಶಕ ಗುರುಕಿರಣ್ ಜತೆ. ಅವರೆಲ್ಲಾ ಸೇರಿ ಹೊಸ ಕೋರ್ಸ್ ಒಂದಕ್ಕೆ ಸೇರಿಕೊಂಡಿಲ್ಲ. ಬದಲಿಗೆ ಅಲ್ಲಿಯ 'ಬೆಳ್ಳಿಹಬ್ಬ'ದ ಉತ್ಸವಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು.

ಈ ಹಿಂದೆ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದವರು ನಟ ಸುದೀಪ್. ಆಗ ತಾನು ಕುಳಿತಿರುತ್ತಿದ್ದ ಬೇಂಚ್, ಕೊಠಡಿ, ಹಾಗೂ ಆವರಣಗಳನ್ನೆಲ್ಲಾ ಕಣ್ತುಂಬಿಕೊಂಡ ಕಿಚ್ಚ, ತಮ್ಮ ಹಳೆಯ ನೆನಪುಗಳತ್ತ ಜಾರಿ ಸ್ವಲ್ಪಹೊತ್ತು ಮೌನವಾದರು. ಅವರ ಜೊತೆಗಿದ್ದ ರಾಗಿಣಿ ಸುದೀಪ್ ಓದಿದ್ದ ಕಾಲೇಜನ್ನು ಮೆಚ್ಚಿಕೊಂಡರು. ಗುರುಕಿರಣ್ ಕಿಚ್ಚರ ಖುಷಿಯ ಕ್ಷಣಕ್ಕೆ ಸಾಕ್ಷಿಯಾದರು.

ಅಲ್ಲಿದ್ದ ವಿದ್ಯಾರ್ಥಿಗಳು ಕಿಚ್ಚ, ರಾಗಿಣಿ ಹಾಗೂ ಗುರುಕಿರಣ್ ನೋಡಿ ಹರ್ಷಗೊಂಡರು. "ನಾನೂ ನಿಮ್ಮಂತೆ ಇದೇ ಕಾಲೇಜಿನಲ್ಲಿ ಓದಿದವನು. ಇಲ್ಲಿ ನಡೆಯುವ 'ಕಾಲೇಜು ಉತ್ಸವ' ಬೇರೆ ಕಾಲೇಜುಗಳಂತಲ್ಲ, ವಿಭಿನ್ನ. ನಾನೂ ಆಗ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಸೋತಿದ್ದೇ ಹಚ್ಚು. ಒಂದುವೇಳೆ ಇಲ್ಲಿ ನಾನಾಗ ಗೆದ್ದಿದ್ದರೆ ಇಂದು ಸಿನಿಮಾರಂಗದಲ್ಲಿ ಇರುತ್ತಿರಲಿಲ್ಲವೇನೋ" ಎಂದು ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿದರು ಸುದೀಪ್. (ಒನ್ ಇಂಡಿಯಾ ಕನ್ನಡ)

English summary
Actor Kichcha Sudeep went as Chief Guest for BMS College Festival. He studied there itself. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X