»   » ಬಂಗಾಳಿ ಚಿತ್ರಕ್ಕೆ ಒಲಿಯಿತು ಲಂಕೇಶ್ ಚಿತ್ರ ಪ್ರಶಸ್ತಿ

ಬಂಗಾಳಿ ಚಿತ್ರಕ್ಕೆ ಒಲಿಯಿತು ಲಂಕೇಶ್ ಚಿತ್ರ ಪ್ರಶಸ್ತಿ

Posted By:
Subscribe to Filmibeat Kannada
P Lankesh
ಬಂಗಾಳಿಯ ಚಿತ್ರ ನಿರ್ದೇಶಕ ಅತನು ಘೋಷ್ ಅವರ 'ಅಂಗ್ಷುಮನೇರ್ ಚೊಬ್ಬಿ' ಚಿತ್ರಕ್ಕೆ 'ಲಂಕೇಶ್ ಚಿತ್ರ ಪ್ರಶಸ್ತಿ 2009' ಒಲಿದಿದೆ. ಪತ್ರಕರ್ತ, ಚಿಂತಕ, ಸಮಾಜವಾದಿ ಹಾಗೂ ಕ್ರಿಯಾಶೀಲ ಚಿತ್ರ ನಿರ್ದೇಶಕರು ಆಗಿದ್ದರು ದಿವಂಗತ ಪಿ ಲಂಕೇಶ್. ಲಂಕೇಶ್ ಚಿತ್ರ ಪ್ರಶಸ್ತಿಯನ್ನು ಮಾರ್ಚ್ 7ರಂದು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರದಾನ ಮಾಡಲಾಗುತ್ತದೆ.

ಲಂಕೇಶ್ ಚಿತ್ರ ಪ್ರಶಸ್ತಿಗಾಗಿ ತಲಾ ಒಂದೊಂದು ಇಂಗ್ಲಿಷ್, ಕನ್ನಡ, ರಾಜಸ್ತಾನಿ, ಮಲಯಾಳಂ, ತಮಿಳು, ಅಸ್ಸಾಮಿ, ಕೊಂಕಣಿ ಸೇರಿದಂತೆ ಆರು ಹಿಂದಿ ಹಾಗೂ ಎರಡು ಬಂಗಾಳಿ ಚಿತ್ರಗಳು ಸ್ಪರ್ಧಿಸಿದ್ದವು. ಖ್ಯಾತ ನಟ ಪ್ರಕಾಶ್ ರೈ, ಕನ್ನಡ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಹಾಗೂ ಚಿತ್ರ ವಿಮರ್ಶಕ ಸಂದೀಪ ನಾಯಕ ಅವರನ್ನೊಳಗೊಂಡ ಆಯ್ಕೆ ಸಮಿತಿ ಅತನು ಘೋಷ್ ಅವರ ಚಿತ್ರವನ್ನು ಆಯ್ಕೆ ಮಾಡಿದೆ.

ಮಾರ್ಚ್ 7ರ ಪ್ರಶಸ್ತಿ ಪ್ರದಾನದ ಬಳಿಕ ಸಂಜೆ 6ಗಂಟೆಗೆ ಅತನು ಘೋಷ್ ಅವರ ಚಿತ್ರವನ್ನು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಪ್ರದರ್ಶಿಸಲಾಗುತ್ತದೆ. 2000ದಲ್ಲಿ ಪಿ ಲಂಕೇಶ್ ನಿಧನರಾದ ಬಳಿಕ ಅವರ ಹೆಸರಿನಲ್ಲಿ ಅವರ ಮಗಳು ಕವಿತಾ ಲಂಕೇಶ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಪಿ ಲಂಕೇಶರು 'ಪಲ್ಲವಿ'ಯಂತಹ ಉತ್ತಮ ಚಿತ್ರವನ್ನು ನಿರ್ದೇಶಿಸಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. ಕವಿತಾ ಲಂಕೇಶ್ ಸಹ ತಮ್ಮ ಚೊಚ್ಚಲ ನಿರ್ದೇಶನದ 'ದೇವೀರಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

ಸಿನಿಮಾ ಮಾಡಬೇಕೆಂಬ ಆಕಾಂಕ್ಷೆಯುಳ್ಳ ನಾಲ್ಕು ಮಂದಿಯ ಕತೆಯೇ 'ಅಂಗ್ಷುಮನೇರ್ ಚೊಬ್ಬಿ'. ಇಟಲಿಯಲ್ಲಿ ಚಿತ್ರ ನಿರ್ದೇಶನ ತರಬೇತಿ ಪಡೆದು ಭಾರತಕ್ಕೆ ಮರಳುತ್ತಾನೆ ಚಿತ್ರದಲ್ಲಿನ ಚಿತ್ರ ನಿರ್ದೇಶಕ. ಆತನ ಬಳಿ ಉತ್ತಮ ಚಿತ್ರಕತೆಯಿರುತ್ತದೆ. ಎಪ್ಪತ್ತು ವರ್ಷದ ಪೈಂಟರ್ ಹಾಗೂ ಯುವ ನರ್ಸ್ ಒಬ್ಬಳ ನಡುವಿನ ಸಂಬಂಧದ ಬಗ್ಗೆ ಚಿತ್ರ ಕುತೂಹಭರಿತವಾಗಿ ಸಾಗುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada