»   » ಗೀತಪ್ರಿಯ ಆರೋಗ್ಯ ಗಂಭೀರ; ಶುಭ ಹಾರೈಸಿರಿ

ಗೀತಪ್ರಿಯ ಆರೋಗ್ಯ ಗಂಭೀರ; ಶುಭ ಹಾರೈಸಿರಿ

Posted By:
Subscribe to Filmibeat Kannada
Lyricist, director Geethapriya
ಬೆಂಗಳೂರು, ಫೆ. 4 : 'ಮಣ್ಣಿನ ಮಗ' ಅಂತಹ ರಾಷ್ಟ್ರಪ್ರಶಸ್ತಿ ಚಿತ್ರ ಮತ್ತು 'ಹೊಂಬಿಸಿಲು' ಚಿತ್ರದಂಥ ಸದಭಿರುಚಿಯ ಚಿತ್ರ ನೀಡಿದ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ, ಗೀತರಚನೆಕಾರರಲ್ಲೊಬ್ಬರಾದ ಗೀತಪ್ರಿಯ (81) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ದೇಹಸ್ಥಿತಿ ಗಂಭೀರವಾಗಿದೆ.

1978ರಲ್ಲಿ ಬಂದ ಹೊಂಬಿಸಿಲು ಚಿತ್ರದ ಜೀವ ವೀಣೆ ನೀಡು ಮಿಡಿತದ ಸಂಗೀತ, ಹೂವಿಂದ ಹೂವಿಗೆ ಹಾರುವ ದುಂಬಿ, 1968ರಲ್ಲಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಮಣ್ಣಿನ ಮಗ ಚಿತ್ರದ ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡುಗಳನ್ನು ಮರೆತವರುಂಟೆ. ಇಂಥ ಅಮರ ಗೀತೆಗಳನ್ನು ನೀಡಿದ ಗೀತಪ್ರಿಯ ಅವರು ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಗಂಟಲಲ್ಲಿ ಕಾಣಿಸಿಕೊಂಡಿದ್ದ ಗಂಟಿನ ಆಪರೇಷನ್ ಆದನಂತರ ಬೆಂಗಳೂರಿನ ಮಹಾಲಕ್ಷ್ಮಿಪುರಂ ಮನೆಯಲ್ಲಿ ಲಕ್ಷ್ಮಣರಾವ್ ಮೋಹಿತೆ (ಗೀತಪ್ರಿಯ) ಹಾಸಿಗೆ ಹಿಡಿದಿದ್ದಾರೆ. ಆಪರೇಷನ್ ಕಾರಣದಿಂದಾಗಿ ಮಾತಾಡಲು ಬಾಯಿ ತೆಗೆದರೂ ಮಾತೇ ಹೊರಡುತ್ತಿಲ್ಲ.

ಅವರ ಆಪ್ತಮಿತ್ರ ರಾಘವೇಂದ್ರ ರಾಜು ಮತ್ತು ಅಭಿಮಾನಿಗಳು ಗೀತಪ್ರಿಯ ಅವರ ನಿವಾಸಕ್ಕೆ ಶುಕ್ರವಾರ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಭಾವಸಾರ ಕ್ಷತ್ರಿಯ ಸಮಾದಾಯ ಗೀತಪ್ರಿಯ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ, 25 ಸಾವಿರ ರು. ನೀಡಿದೆ. ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿಯವರು 1 ಲಕ್ಷ ರು. ನೀಡಿದ್ದಾರೆ.

ಅವರ ಚಿತ್ರಗೀತೆಗಳ ಅಭಿಮಾನಿಗಳು ಹಾಗು ಸದಭಿರುಚಿಯ ಕನ್ನಡ ಚಿತ್ರಗೀತ ಸಾಹಿತ್ಯಾಭಿಮಾನಿಗಳ ಪರವಾಗಿ ಒನ್ಇಂಡಿಯ ಕನ್ನಡ ಬಳಗ ಗೀತಪ್ರಿಯ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತದೆ.

English summary
Geetha Priya (81), a living legend of Kannada filmdom is fighting ill health. He has penned dozens of memorable song lyrics, you will never forget. Wish Lakshmanrao Mohite (Geethapriya) speedy recovery.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada