»   » ಚುನಾವಣೆಯಲ್ಲಿ ಮಾಳವಿಕ ಜಯಭೇರಿ

ಚುನಾವಣೆಯಲ್ಲಿ ಮಾಳವಿಕ ಜಯಭೇರಿ

Posted By:
Subscribe to Filmibeat Kannada
Malavika Avinash
ಬೆಂಗಳೂರು ನಗರದಲ್ಲಿ ಈಗಷ್ಟೆ ಮಹಾನಗರ ಪಾಲಿಕೆ ಚುನಾವಣೆ ಮುಗಿದಿದೆ. ಏಪ್ರಿಲ್ 5ರಂದು ಪ್ರಕಟವಾಗಲಿರುವ ಫಲಿತಾಂಶಕ್ಕಾಗಿ ರಾಜಕೀಯ ಪಕ್ಷಗಳು ಸೇರಿದಂತೆ ಬೆಂಗಳೂರಿನ ನಾಗರಿಕರು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ಆದರೆ ಚಾಮುಂಡಿ ತವರಿನ ಮೈಸೂರಿನಲ್ಲಿ ಸದ್ದಿಲ್ಲದೆ ಚುನಾವಣೆ ನಡೆದು ಅದರಲ್ಲಿ ಸ್ಪರ್ಧಿಸಿದ ಮಹಿಳಾ ಅಭ್ಯರ್ಥಿ ಭಾರಿ ಅಂತರದಿಂದ ಜಯಗಳಿಸಿದ್ದಾರೆ!

ಮೈಸೂರಿನ ಪ್ರತಿಷ್ಠಿತ ಕ್ಷೇತ್ರದಿಂದ ಖ್ಯಾತ ಉದ್ಯಮಿಯೊಬ್ಬರ ಸಹೋದರ ಹಾಗೂ ಮಹಿಳಾ ಅಭ್ಯರ್ಥಿಯೊಬ್ಬರು ಚುನಾವಣೆಗೆ ಸ್ಪರ್ಧಿಸಿರುತ್ತಾರೆ. ಈ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿ ಜಯಶೀಲರಾಗುತ್ತಾರೆ. ವಿಜಯೋತ್ಸವವನ್ನು ಆಚರಿಸುತ್ತಾರೆ. ಈ ಸನ್ನಿವೇಶವನ್ನು 'ಹುಲಿ' ಚಿತ್ರಕ್ಕಾಗಿ ನಿರ್ದೇಶಕ ಓಂಪ್ರಕಾಶ್‌ರಾವ್ ಮೈಸೂರಿನ ಟೌನ್‌ಹಾಲ್‌ನಲ್ಲಿ ಚಿತ್ರಿಸಿಕೊಂಡರು. ಖ್ಯಾತ ಉದ್ಯಮಿ ಪಾತ್ರದಲ್ಲಿ ಶೋಭರಾಜ್, ಅವರ ಸಹೋದರನಾಗಿ ಪ್ರೇಮ್ ಮತ್ತು ಮಹಿಳಾ ಅಭ್ಯರ್ಥಿಯಾಗಿ ಮಾಳವಿಕ ಅವಿನಾಶ್ ಅಭಿನಯಿಸಿದ್ದರು.

ಶಿವು ಎಂಟರ್ ಪ್ರೈಸಸ್ ಲಾಂಛನದಲ್ಲಿ ಬಿ.ಎಸ್.ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮನೋಹರ್ ಅವರ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್‌ರಾಯ್ ಸಂಗೀತ, ಡೆನ್ನಿಸಾ ಪ್ರಕಾಶ್ ಕಥೆ, ಡಿ.ಮನೋಹರ್ ಚಿತ್ರಕಥೆ, ಪಳನಿರಾಜ್ ಸಾಹಸ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಿಶೋರ್, ಜೆನ್ನಿಫರ್ ಕೋತ್ವಾಲ್, ಸ್ವಸ್ತಿಕ್‌ಶಂಕರ್, ಆದಿಲೋಕೇಶ್, ಪ್ರೇಮ್, ಶೋಭರಾಜ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕಾ, ಸುಮಿತ್ರಾ, ಚಿತ್ರಾಶೆಣೈ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada