»   » ಜೆಂಟಲ್‌ಮನ್ ಪ್ರಭುದೇವ ಈಗ ಪತ್ನಿಯಿಂದ ಮುಕ್ತ ಮುಕ್ತ

ಜೆಂಟಲ್‌ಮನ್ ಪ್ರಭುದೇವ ಈಗ ಪತ್ನಿಯಿಂದ ಮುಕ್ತ ಮುಕ್ತ

Posted By:
Subscribe to Filmibeat Kannada

ಕಡೆಗೂ ನಟ, ನೃತ್ಯ ನಿರ್ದೇಶಕ, ನಿರ್ದೇಶಕ ಪ್ರಭುದೇವ ಅವರಿಗೆ ತನ್ನ ಪತ್ನಿಯಿಂದ ಬಿಡುಗಡೆ ಭಾಗ್ಯ ಲಭಿಸಿದೆ. ತನ್ನ ಪತ್ನಿ ರಾಮಲತಾ ಅವರಿಂದ ವಿವಾಹ ವಿಚ್ಛೇದನ ಬಯಸಿ ಪ್ರಭುದೇವ ಕೋರ್ಟ್ ಮೆಟ್ಟಿಲೇರಿದ್ದರು. ಚೆನ್ನೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿದೆ.

ಪ್ರಭುದೇವ ಈಗ ಸ್ವತಂತ್ರ ಹಕ್ಕಿ. ಇಷ್ಟು ದಿನ ಅವರು ಅತ್ತ ವಿವಾಹ ವಿಚ್ಛೇದನ ಸಿಗದೆ ಇತ್ತ ನಯನತಾರಾರನ್ನು ಮದುವೆಯಾಗಲು ಸಾಧ್ಯವಾಗದ ಪರಿಸ್ಥಿತಿಗೆ ಸಿಲುಕಿದ್ದರು. ಈಗ ವಿವಾಹ ವಿಚ್ಛೇದನ ಮೂಲಕ ಇಬ್ಬರೂ ಬೇರ್ಪಟ್ಟಿದ್ದು, ಮಾಜಿ ಪತ್ನಿಯಿಂದ ಪ್ರಭುದೇವ ಮುಕ್ತ ಮುಕ್ತರಾಗಿದ್ದಾರೆ.

ಜೂನ್ 30ರಂದು ಪ್ರಭುದೇವ ಹಾಗೂ ಆತನ ಪತ್ನಿ ಚೆನ್ನೈನ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಇಬ್ಬರೂ ಗೈರುಹಾಜರಾಗಿದ್ದರು. ಜುಲೈ 2ರಂದು ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿ ವಿವಾಹ ವಿಚ್ಛೇದನ ಪಡೆದಿದ್ದಾರೆ.

ಜುಲೈ 30ರಂದು ನ್ಯಾಯಾಲಯಕ್ಕೆ ಹಾಜರಾದರೆ ಎಲ್ಲಿ ಮಾಧ್ಯಮಗಳು ಈ ಸುದ್ದಿಯನ್ನು ಚಚ್ಚಿ ಬಿಸಾಕುತ್ತವೋ ಎಂಬ ಭಯದಲ್ಲಿ ಬರಲಿಲ್ಲ ಎನ್ನುತ್ತವೆ ಮೂಲಗಳು. ನ್ಯಾಯಾಲಯ ಜುಲೈ 10ರವರೆಗೂ ಅವಕಾಶ ನೀಡಿತ್ತು, ಯಾವುದೇ ಸುಳಿವು ನೀಡದಂತೆ ಜುಲೈ 2ರಂದು ಇಬ್ಬರೂ ನ್ಯಾಯಾಲಕ್ಕೆ ಹಾಜರಾಗಿ ವಿಚ್ಛೇದನದಲ್ಲಿ ಬೇರ್ಪಟ್ಟಿದ್ದಾರೆ. (ಏಜೆನ್ಸೀಸ್)

English summary
The latest news is that Prabhu Deva was granted divorce with his wife Ramlath on July 2 at the family court in Chennai.The family court on Saturday, July2 instead of July 10th and the divorce was granted by the Magistrate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada