»   » ರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!

ರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!

Posted By: ರಾಜೇಂದ್ರ ಚಿಂತಾಮಣಿ
Subscribe to Filmibeat Kannada
Retro Rani contest
ಕಲ್ಪನಾ, ಮಂಜುಳ,ಆರತಿ,ಜಯಂತಿ...ತಮ್ಮ ಮೋಹಕ ಮೈಮಾಟ, ರೂಪ ಲಾವಣ್ಯಗಳಿಂದ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನ ಸೂರೆಗೊಂಡ ನಟಿಯರು.ಅಂದಿನ ಕಾಲದ ಅವರ ವೇಷ ಭೂಷಣ, ಕೇಶ ವಿನ್ಯಾಸ, ಉಡುಪು ವೈಯ್ಯಾರಗಳು ಹೇಗಿದ್ದವು!?

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಖತ್ ಹಾಟ್ 98.3ಎಫ್ ಎಂ ರೇಡಿಯೋ 'ರೆಟ್ರೊ ರಾಣಿ' ಎಂಬ ಸ್ಪರ್ಧೆಯನ್ನು ತನ್ನ ಕೇಳುಗರಿಗೆ ಒಡ್ಡಿತ್ತು. ರೆಟ್ರೊ ರಾಣಿಯರಾಗಿ 98.3ಎಫ್ ಎಂ ರೇಡಿಯೋ ಕೇಳುಗರಾದ ವೀಣಾ, ಶ್ವೇತಾ, ಚೈತ್ರಾ ಮತ್ತು ಹುಡುಗಾಟದ ಹುಡುಗಿ ಆರ್ ಜೆ ವರ್ಷಾ ಸಹ ಆಯ್ಕೆಯಾಗಿದ್ದರು. ಥೇಟ್ ಕಲ್ಪನಾ, ಮಂಜುಳ,ಆರತಿ,ಜಯಂತಿ ಅವರನ್ನು ಹೋಲುವಂತೆ ಸ್ಪರ್ಧೆಯಲ್ಲಿ ಗೆದ್ದವರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಅಮೃತ ಮಹೋತ್ಸವ ಸಂಭ್ರಮವನ್ನು ಮತ್ತಷ್ಟ್ಟು ಹೆಚ್ಚಿಸಲು 'ರೆಟ್ರೊ ರಾಣಿ' ಸ್ಪರ್ಧೆಯನ್ನು ರೇಡಿಯೋ ಮಿರ್ಚಿ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಕೇಳುಗರಿಗೆ ಎಪ್ಪತ್ತರ ದಶಕದ ಕನ್ನಡ ಚಿತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು 'ಬೊಂಬಾಟ್ ಭಾಮ' ಕಾರ್ಯಕ್ರಮದ ಮೂಲಕ ಕೇಳಲಾಗಿತ್ತ್ತು. ಈ ಜನಪ್ರಿಯ ಕಾರ್ಯಕ್ರಮವನ್ನು ಹುಡುಗಾಟದ ಹುಡುಗಿ ಆರ್ ಜೆ ವರ್ಷಾ ನಡೆಸಿಕೊಡುತ್ತಿರುವುದು ಗೊತ್ತೇ ಇದೆ.

'ಬೊಂಬಾಟ್ ಭಾಮಾ' ಇದೊಂದು ಸಂಪೂರ್ಣ ಮಹಿಳಾ ಕಾರ್ಯಕ್ರಮ . ಆರೋಗ್ಯ ಸಲಹೆಗಳು, ಇಂದಿನ ಸುದ್ದಿಯೇನು? ಮುಂತಾದ ಉಪಯುಕ್ತ ಸಲಹೆ ಸೂಚನೆಗಳು ಈ ಕಾರ್ಯಕ್ರಮದ ಮೂಲಕ ವರ್ಷಾ ನೀಡುತ್ತಾರೆ. ಪ್ರತಿ ದಿನ ಸೋಮವಾರ ದಿಂದ ಶನಿವಾರದವರೆಗೆ ಬೆಳಗ್ಗೆ 11ರಿಂದ ಮಧಾಹ್ನ 2 ಗಂಟೆಯ ತನಕ ಬೊಂಬಾಟ್ ಭಾಮಾ ಪ್ರಸಾರವಾಗುತ್ತದೆ.

'ರೆಟ್ರೊ ರಾಣಿ'ಯರಾಗಿ ಆಯ್ಕೆಯಾದ ವರ್ಷಾ ಮತ್ತು ವೀಣಾ ಅವರು ತಮ್ಮ ಆಂಗಿಕ ಅಭಿನಯದ ಮೂಲಕ ಮತ್ತೆ ಮಂಜುಳ ಮತ್ತು ಕಲ್ಪನಾರನ್ನು ನೆನಪಿಸಿದರು. ಅವರ ಕೇಶವಿನ್ಯಾಸ, ಉಡುಗೆ ತೊಡುಗೆಗಳು ಥೇಟ್ ಅಂದಿನ ತಾರೆಯರನ್ನು ಹೋಲುತ್ತಿದ್ದವು.ಮಂಜುಳ ಪಾತ್ರಧಾರಿಯಾಗಿ ಆಗಮಿಸಿದ್ದ ಆರ್ ಜೆ ವರ್ಷಾ ಮಾತನಾಡುತ್ತಾ, ನಾನು ಮಂಜುಳಾ ಅಷ್ಟು ದಪ್ಪ ಇಲ್ಲ. ಆದರೂ ನಾನು ಆ ಕಾಲದ ಮಂಜುಳಾ ಆಗಿ ಕಾಣಿಸಿಕೊಳ್ಳುತ್ತಿರುವುದು ಸಖತ್ ಖುಷಿ ಕೊಟ್ಟಿದೆ ಎಂದರು.

ಕಲ್ಪನಾ ಪಾತ್ರಧಾರಿ ವೀಣಾ ಅವರು ಯಾಕೋ ಏನೋ ತುಸು ನಾಚಿಕೊಂಡಿದ್ದರು. ಅವರ ಹಾವಭಾವಗಳು ಕಲ್ಪನಾರನ್ನು ನೆನಪಿಸುವಂತಿತ್ತು. ಆದರೆ ಕಲ್ಪನಾರಿಗೂ ಅವರ ಮೈಮಾಟಕ್ಕೂ ಅಜಗಜಾಂತರ! ಅಂದಹಾಗೆ ಗೆದ್ದ ಸ್ಪರ್ಧಿಗಳಿಗೆಲ್ಲಾ ಮೇಕಪ್ ಮಾಡಿದವರು ಬೆಂಗಳೂರು ಲಿಂಗರಾಜಪುರದ ಶ್ರೀಸಾಯಿ ಬ್ಯೂಟಿ ಪಾರ್ಲರ್ ನ ಕವಿತಾ. ಅವರ ಮೇಕಪ್ ಕಲೆ ನಿಜಕ್ಕೂ ಅದ್ಭುತವಾಗಿತ್ತು. ರೇಡಿಯೋ ಮಿರ್ಚಿ ರೆಟ್ರೊ ರಾಣಿಯರ ಚಿತ್ರಪಟ

English summary
Retro Rani contest Radio Mirchi 98.3 FM R J Vasha Bombaat Bhama,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada