For Quick Alerts
  ALLOW NOTIFICATIONS  
  For Daily Alerts

  ಕ್ರೇಜಿ ಸ್ಟಾರ್ ರವಿಚಂದ್ರನ್ ಜತೆ ಮತ್ತೆ ಹಂಸಗೀತೆ

  By Rajendra
  |

  ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ ಮತ್ತೆ ಒಂದಾಗಿದೆ. ಗಂಗಾಧರ್ ನಿರ್ಮಿಸಲಿರುವ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖ ಮೋಡಿ ಮಾಡಲಿದ್ದಾರೆ. ಆದರೆ ಈ ಚಿತ್ರ ತೆರೆಗೆ ಬರಬೇಕಾದರೆ ಪ್ರೇಕ್ಷಕರು ಸ್ವಲ್ಪ ಸಮಯ ಕಾಯಲೇಬೇಕು.

  "ನಾವಿಬ್ಬರು ಉತ್ತಮ ಗೆಳೆಯರು. ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಅತ್ಯುತ್ತಮ ಚಿತ್ರವನ್ನು ಕೊಡುವುದಾಗಿ" ಹಂಸಲೇಖ ತಿಳಿಸಿದ್ದಾರೆ. ಇದುವರೆಗೂ ಇವರಿಬ್ಬರ ಕಾಂಬಿನೇಷನ್‌ನಲ್ಲಿ 25 ಚಿತ್ರಗಳು ಬಂದಿವೆ. ಆದರೆ ಅದ್ಯಾಕೋ ಏನೋ ಇವರಿಬ್ಬರು ನಾನೊಂದು ತೀರ ನೀನೊಂದು ತೀರ ಎಂಬಂತೆ ದೂರವಾಗಿದ್ದರು.

  ಇಬ್ಬರ ನಡುವಿನ ಮನಸ್ತಾಪದಿಂದ ದೂರವಾಗಿದ್ದ ಇವರನ್ನು 'ಒಂದಾಗೋಣ ಬಾ' ಚಿತ್ರದಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬೆಸೆದಿದ್ದರು. ಈಗ ಗಂಗಾಧರ್ ನಿರ್ಮಿಸಲಿರುವ ಚಿತ್ರಕ್ಕೆ 'ಅಂಜದ ಗಂಡು' ಎಂದು ಹೆಸರಿಡಲಾಗಿದೆ. ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕತೆಯನ್ನು ಹೆಣೆಯಲಾಗಿದೆಯಂತೆ. ಶೀಘ್ರದಲ್ಲೇ ಈ ಚಿತ್ರದ ವಿವರಗಳು ಹೊರಬೀಳಲಿವೆ.

  English summary
  Kannada films successful pair Crazy Star Ravichandran and music director Hamsalekha join again. Hamsalekha and V Ravichandran are working together in ‘Anjada Gandu’ the yesteryears film. It will be a recreation to the present scenario.The movie is producing by Gangadhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X