»   »  'ಹೂ'ವಿನಲ್ಲಿ ಒಂದಾದ ಕ್ರೇಜಿಸ್ಟಾರ್ ನಮಿತಾ

'ಹೂ'ವಿನಲ್ಲಿ ಒಂದಾದ ಕ್ರೇಜಿಸ್ಟಾರ್ ನಮಿತಾ

Subscribe to Filmibeat Kannada

ಕ್ರೇಜಿ ಸ್ಟಾರ್ ನಿರ್ದೇಶನದ ಹಾಗೂ ಅಭಿನಯದ 'ಹೂ' ಚಿತ್ರ ಸೆಟ್ಟೇರಿದೆ. 'ಈ ಶತಮಾನದ ವೀರ ಮದಕರಿ'ಯ ದಿನೇಶ್ ಗಾಂಧಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸೆಪ್ಟೆಂಬರ್ 2 ರ ಬುಧವಾರ ಬೆಳಗ್ಗೆ ಬೆಂಗಳೂರಿನ ರಾಜಾಜಿನಗರದ ಅಂಕಾಳ ಪರಮೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತನೆರವೇರಿತು.

ಹೂ ಚಿತ್ರದಲ್ಲಿ ನಮಿತಾ ಹಾಗೂ ಮೀರಾ ಜಾಸ್ಮಿನ್ ನಟಿಸುತ್ತಿದ್ದಾರೆ. ತೆಲುಗಿನ ಸೂಪರ್ ಹಿಟ್ ಚಿತ್ರ 'ವಸಂತಂ' ರೀಮೇಕ್ ಇದಾಗಿದ್ದು ವೆಂಕಟೇಶ್ ಅಭಿನಯಿಸಿದ್ದರು. ತಮ್ಮ 'ಹೂ' ಚಿತ್ರದ ಬಗ್ಗೆ ದಿನೇಶ್ ಗಾಂಧಿ ಮಾತನಾಡುತ್ತಾ, ಸೆಪ್ಟೆಂಬರ್ 2ರಂದು ದಿನಾ ಚೆನ್ನಾಗಿದ್ದ್ದ ಕಾರಣ ಹೂ ಚಿತ್ರ ಸೆಟ್ಟೇರಿದೆ. ಸೆಪ್ಟೆಂಬರ್ 10ರಿಂದ ಚಿತ್ರೀಕರಣ ಆರಂಭವಾಗುತ್ತದೆ ಎಂದರು.

''ಇದು ಪ್ರೀತಿ ಮತ್ತು ಗೆಳೆತನದ ಕಥಾಹಂದರದ ಚಿತ್ರ. ರವಿಚಂದ್ರನ್ ಈ ಚಿತ್ರದಲ್ಲಿ ಅಭಿನಯಿಸಿ ನಿರ್ದೇಶಿಸುತ್ತಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದೇವೆ '' ಎನ್ನುತ್ತಾರೆ ದಿನೇಶ್. ಒಟ್ಟಿನಲ್ಲಿ ಹೂ ಚಿತ್ರದ ಮೂಲಕ ನಮಿತಾ ಮತ್ತೆ ಕನ್ನಡಕ್ಕೆ ದಾಂಗುಡಿ ಇಡುತ್ತಿದ್ದಾರೆ.

ವೀರ ಮದಕರಿ ಚಿತ್ರದ ಕಲಾವಿದರಿಗೆ ಸಂಭಾವನೆ ಕೊಟ್ಟ್ಟಿಲ್ಲವಂತಲ್ಲಾ? ಎಂದು ದಿನೇಶ್ ರನ್ನು ಕೇಳಿದರೆ. ''ಈ ಕಾಲದಲ್ಲಿ ಯಾರಾದರೂ ಸಂಭಾವನೆ ಇಲ್ಲದೆ ಅಭಿನಯಿಸಲು ಒಪ್ಪ್ಪುತ್ತಾರಾ? ನೀವೇ ಹೇಳಿ? ಚಿತ್ರೋದ್ಯಮದಲ್ಲಿ ಅವರದೇ ಆದಂತಹ ಸಂಘಟನೆಗಳಿವೆ.ಅವುಗಳ ಮೂಲಕ ವಸೂಲಿ ಮಾಡಿಸಿಕೊಳ್ಳುತ್ತಾರೆ. ಇದು ನನಗೆ ಸಂಬಂಧಪಡದ ವಿಷಯ'' ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...