»   »  ಮಹೇಂದ್ರ ನಿರ್ದೇಶನದಲ್ಲಿ ಸಂಜನಾ 'ಶ್ಲೋಕ'

ಮಹೇಂದ್ರ ನಿರ್ದೇಶನದಲ್ಲಿ ಸಂಜನಾ 'ಶ್ಲೋಕ'

Subscribe to Filmibeat Kannada
Sanja back with Sloka
'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಗಂಡ ಹೆಂಡತಿ ಚಿತ್ರದಲ್ಲಿ ನಟಿಸಿ ತಪ್ಪು ಮಾಡಿದೆ ಎಂಬ ಅಪರಾಧಿ ಪ್ರಜ್ಞೆ ಸಂಜನಾರನ್ನು ಕಾಡುತ್ತಿತ್ತು. ಈಗ ಅವರ ನಟನೆಗೆ ಸವಾಲೊಡ್ಡುವಂತಹ ಪಾತ್ರ ಸಿಕ್ಕಿದೆಯಂತೆ. ಹಾಗಾಗಿ ಸಂಜನಾ ಖುಷಿಯಾಗಿದ್ದಾರೆ. ಚಿತ್ರದ ಹೆಸರು ಶ್ಲೋಕ.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಹೇಂದ್ರ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇವರ ನಿರ್ದೆಶನದ 'ಬ್ಲ್ಯಾಕ್' ಚಿತ್ರ ಜೂನ್ 12ರಂದು ಬಿಡುಗಡೆಗೆಯಾಗಲಿದೆ. ಅದೇ ದಿನ 'ಶ್ಲೋಕ' ಚಿತ್ರವೂ ಸೆಟ್ಟೇರಲಿದೆ. ಇದೊಂದು ನಾಯಕಿ ಪ್ರಧಾನವಾಗಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. 'ಶ್ಲೋಕ'ದಲ್ಲಿ ಇಬ್ಬರು ನಾಯಕ ನಟರು.

ಸಂಜನಾ ನಟಿಸಿರುವ 'ಈ ಸಂಜೆ' ಚಿತ್ರ ಇನ್ನೂ ತೆರೆಕಂಡಿಲ್ಲ. ದರ್ಶನ್ ಅಭಿನಯದ ಅರ್ಜುನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಪೂರ್ಣ ಪ್ರಮಾಣದ ನಾಯಕಿಯಾಗಿ 'ಶ್ಲೋಕ' ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ.

ತೆಲುಗಿನಲ್ಲಿ ನಟಿಸಿರುವ 'ಸಮರ್ಥುಡು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಬಾಲಿವುಡ್ ನಲ್ಲೂ ಅವಕಾಶಗಳು ಹುಡುಕಿಕೊಂಡು ಬಂದಿವೆ. ಹಿಂದಿ ಚಿತ್ರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಸಂಜನಾ ಸಿದ್ಧವಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada