»   »  ಸುದೀಪ್, ಯಾದವ್ ನಡುವೆ ಹೊಸ ದೋಸ್ತಿ

ಸುದೀಪ್, ಯಾದವ್ ನಡುವೆ ಹೊಸ ದೋಸ್ತಿ

Subscribe to Filmibeat Kannada
Sudeep
ನಟ ಸುದೀಪ್ ಮತ್ತು ನಿರ್ಮಾಪಕ ರಮೇಶ್ ಯಾದವ್ ನಡುವೆ ಹೊಗೆಯಾಡುತ್ತಿದ್ದ ದ್ವೇಷದ ಬೆಂಕಿ ಈಗ ತಣ್ಣಗಾಗಿದೆ. ಕೆಲದಿನಗಳ ಹಿಂದೆ ಸಂಭಾವನೆ ಹಣಕ್ಕೆ ಸಂಬಂಧಿಸಿದಂತೆ ಸುದೀಪ್ ವಿರುದ್ಧ ಯಾದವ್ ಕರ್ನಾಟಕ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು.

ಸುದೀಪ್ ಗೆ ಅಡ್ವಾನ್ಸ್ ಹಣ ಅಂತ ರು.22 ಲಕ್ಷ ಕೊಟ್ಟಿದ್ದೆ. ಎರಡು ವರ್ಷ ಕಳೆಯುತ್ತಾ ಬಂದರೂ ಚಿತ್ರದಲ್ಲಿ ನಟಿಸಲು ಕ್ಯಾತೆ ತೆಗೆಯುತ್ತಿದ್ದಾರೆ. ಹಣ ಹಿಂತಿರುಗಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯಾದವ್ ಆರೋಪಿಸಿದ್ದರು. ಆದರೆ ಈಗ ಅದೆಲ್ಲಾ ತಣ್ಣಗಾಗಿ ಇಬ್ಬರ ನಡುವೆ ಮತ್ತೆ ಸ್ನೇಹ ಸಂಬಂಧ ಚಿಗುರಿದೆ.

ಕೆಲದಿನಗಳ ಹಿಂದೆ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ ತಮ್ಮಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಯಾದವ್ ರ ಚಿತ್ರ ಇದೀಗ ಸೆಟ್ಟೇರುವ ಲಕ್ಷಣಗಳು ಕಾಣಿಸಿವೆ. ಮೂಲಗಳ ಪ್ರಕಾರ ಸುದೀಪ್ ರೊಂದಿಗಿನ ಯಾದವ್ ಚಿತ್ರ ನವೆಂಬರ್ ನಲ್ಲಿ ಸೆಟ್ಟೇರಲಿದೆಯಂತೆ.

ಏತನ್ಮಧ್ಯೆ ಯಾದವ್ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಯಾದವ್. ಈ ಚಿತ್ರವನ್ನು ಎಸ್ ಮಹೇಂದರ್ ನಿರ್ದೇಶಿಸಲಿದ್ದು ಮುಖ್ಯ ಭೂಮಿಕೆಯಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ. ಚಿತ್ರಕ್ಕೆ 'ಹಾಡುಗಾರ' ಎಂದು ಹೆಸರಿಡಲಾಗಿದೆ. ಚಿತ್ರಕತೆಗೆ ಶಿವಣ್ಣ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಡೇಟ್ಸ್ ಹೊಂದಾಣಿಕೆಯನ್ನು ಅಂತಿಮಗೊಳಿಸಬೇಕಾಗಿದೆ ಎನ್ನುತ್ತಾರೆ ಯಾದವ್.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada