For Quick Alerts
  ALLOW NOTIFICATIONS  
  For Daily Alerts

  ಕಠಾರಿವೀರ ಚಿತ್ರಕ್ಕೆ ಕಿಚ್ಚ ಸುದೀಪ್ ಕಂಠದಾನ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ಭಾರಿ ಬಜೆಟ್ ಚಿತ್ರ 'ಕಠಾರಿವೀರ ಸುರಸುಂದರಾಂಗಿ' ಮೇ 10ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹಲವು ಆಕರ್ಷಣೆಗಳಿದ್ದು ಕಿಚ್ಚ ಸುದೀಪ್ ಕಂಠದಾನ ಮಾಡಿರುವುದು ಪ್ರಮುಖ ಆಕರ್ಷಣೆ ಆಗಲಿದೆ ಎನ್ನುತ್ತದೆ ಚಿತ್ರತಂಡ.

  ಕೇವಲ ಒಂದೂವರೆ ನಿಮಿಷದಷ್ಟು ಕಾಲ ಕಿಚ್ಚ ಸುದೀಪ್ ಧ್ವನಿ ಚಿತ್ರದ ಆರಂಭದಲ್ಲಿ ಕೇಳಿಸಲಿದೆ. ತಮ್ಮ ಮಾತಿನ ಮೂಲಕ ಚಿತ್ರದ ಬಗ್ಗೆ ಸುದೀಪ್ ಪರಿಚಯ ಮಾಡಿಕೊಡಲಿದ್ದಾರೆ. ಈ ಸನ್ನಿವೇಶ 3D ಹಾಗೂ 2D ಎರಡೂ ಚಿತ್ರಗಳಲ್ಲಿರುತ್ತದೆ ಎಂದು ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.

  ರಾಜ್ಯದಲ್ಲಿ 'ಕಠಾರಿವೀರ' ಚಿತ್ರ ಬಿಡುಗಡೆಯಾದ ಮೇಲೆ ತೆಲುಗು ಹಾಗೂ ತಮಿಳಿಗೆ ಡಬ್ ಮಾಡುವುದಾಗಿ ಮುನಿರತ್ನ ಹೇಳಿದ್ದಾರೆ. ಉಪ್ಪಿ ಚಿತ್ರಕ್ಕೆ ಸುದೀಪ್ ಧ್ವನಿ ನೀಡುತ್ತಿರುವುದು ಕನ್ನಡ ಚಿತ್ರಗಳ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಎನ್ನಬಹುದು. (ಏಜೆನ್ಸೀಸ್)

  English summary
  Actor Sudeep has given voice over to Kannada film Katari Veera Surasundarangi, which leads Upendra and Ramya. This voice over comes in as an introduction to the film said the producer Munirathna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X