For Quick Alerts
  ALLOW NOTIFICATIONS  
  For Daily Alerts

  ಎಂಧಿರನ್ ನೋಡಲು ಸುರೇಶ್ ಹೆಬ್ಳೀಕರ್ ಕಾತುರ

  By Rajendra
  |

  ಬಹುಕೋಟಿ ಬಜೆಟ್ ನ ಬಹುಭಾಷಾ ಚಿತ್ರ 'ಎಂಧಿರನ್'. ರು.150 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ರು.190 ಕೋಟಿ ಬಾಚಿದೆ. ನಿರ್ದೇಶಕ ಶಂಕರ್ ತಂತ್ರಗಾರಿಕೆ, ರಜನಿಕಾಂತ್ ಮ್ಯಾಜಿಕ್ ಕ್ಲಿಕ್ಕಾಗಿದೆ. ಈ ಚಿತ್ರವನ್ನು ತಾವು ನೋಡುವುದಾಗಿ ಕನ್ನಡದ ಪ್ರತಿಭಾನ್ವಿತ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಆಸಕ್ತಿ ವ್ಯಕ್ತಪಡಿಸಿದ್ದಾರೆ.

  ಕೆಲ ವರ್ಷಗಳ ಹಿಂದೆ ಅಂಬರೀಷ್ ಏರ್ಪಡಿಸಿದ್ದ ಔತಣಕೂಟದಲ್ಲಿ ರಜನಿಕಾಂತ್ ಅವರ ಜೊತೆ ನಾನು ಭಾಗಿಯಾಗಿದ್ದೆ. ನೀವು ತಮಿಳಿನವರಲ್ಲ. ತಮಿಳು ಮೂಲದವರು ಅಲ್ಲ.ಎಂಜಿಆರ್, ಶಿವಾಜಿ ಗಣೇಶ್ ಅವರಂತಹ ದಿಗ್ಗಜರ ನಡುವೆ ನೀವು ತಮಿಳು ನೆಲದಲ್ಲಿ ಹೇಗೆ ಅಷ್ಟು ದೊಡ್ದ ಸ್ಟಾರ್ ಆಗಲು ಸಾಧ್ಯವಾಯಿತು ಎಂದು ಕೇಳಿದ್ದೆ. ಆಗ ಅವರು ಎಲ್ಲಾ 'ಟೈಮ್' ಎಂದಿದ್ದಾಗಿ ಹೆಬ್ಳೀಕರ್ ನೆನಪಿಸಿಕೊಂಡಿದ್ದಾರೆ.

  'ಎಂಧಿರನ್' ಚಿತ್ರವನ್ನು ನಾನು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇನೆ. ತೆರೆಯ ಮೇಲೆ ಅವರು ತಮ್ಮ ಸ್ಟೈಲ್ ಮತ್ತು ತಮ್ಮದೇ ಆದಂತಹ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೂ ನಿಜ ಜೀವನದಲ್ಲಿ ಮಾತ್ರ ಅವರು ಸಾಮಾನ್ಯ ವ್ಯಕ್ತಿಯಂತೆ ಇರುತ್ತಾರೆ. ಬೊಕ್ಕ ತಲೆಯಾಗಿದ್ದರೂ ವಿಗ್ ಧರಿಸುವುದಿಲ್ಲ. ವಯಸ್ಸನ್ನು ಮರೆಮಾಚುವಂತಹದ್ದೆನನ್ನ್ನು ಅವರು ಮಾಡುವುದಿಲ್ಲ ಎಂದು ರಜನಿಕಾಂತ್ ಅವರನ್ನು ಸುರೇಶ್ ಹೆಬ್ಳೀಕರ್ ಶ್ಲಾಘಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X