»   » ಟೀನಾಗೆ ಪ್ರಥಮ ಚುಂಬನದಲ್ಲೇ ದಂತಭಗ್ನ

ಟೀನಾಗೆ ಪ್ರಥಮ ಚುಂಬನದಲ್ಲೇ ದಂತಭಗ್ನ

Posted By:
Subscribe to Filmibeat Kannada

ಕೊಡಗಿನ ಬೆಡಗಿ ಟೀನಾ ಪೊನ್ನಪ್ಪ ಅಭಿನಯದ ಚೊಚ್ಚಲ ಕನ್ನಡ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಬೆಳ್ಳಿ ಮೋಡದ ಅಂಬರ' ಚಿತ್ರದಲ್ಲಿ ಟೀನಾ ಉತ್ತಮ ಅಭಿನಯ ನೀಡಿದ್ದರೂ ಚಿತ್ರ ಮಾತ್ರ ಬಾಕ್ಸಾಫೀಸಲ್ಲಿ ಮುಗ್ಗರಿಸಿದೆ. ಆಕೆ ಅಭಿನಯದ ಚಿತ್ರ ಆರಂಭದಲ್ಲೇ ಮುಗ್ಗರಿಸಿ ಪ್ರಥಮ ಚುಂಬನಂ ದಂತಭಗ್ನಂ ಎಂಬಂತಾಗಿದೆ.

ಟೀನಾ ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಟೀನಾ ತೊಡಗಿಕೊಂಡಿದ್ದಾರೆ. ಮೇಕಪ್ ಇಲ್ಲದೆ ಆಕೆ ತಮಿಳಿನಲ್ಲಿ ನಟಿಸಿದ್ದ 'ಮೀರಾ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು.

ಟೀನಾ ತೆಲುಗಿನಲ್ಲಿ ನಟಿಸಿದ್ದ್ದ 'ಎಂಥ ವಾರುಲೈನ' ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಮಲೆಯಾಳಂನಲ್ಲಿ ನಟಿಸಿದ್ದ 'ಬ್ಲಾಕ್ ಡಾಲ್ಸ್' ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈಕೆ ಅಭಿನಯದ 'ಬೆಳ್ಳಿ ಮೋಡದ ಅಂಬರ' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುದು ದುರಂತ. ಟೀನಾ ಸದ್ಯಕ್ಕೆ ಮಾಡೆಲಿಂಗ್ ನಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X