»   »  'ಲಂಡನ್ ಗೌಡ'ನಿಗೆ ಜತೆಯಾದ ವಿ ಮನೋಹರ್

'ಲಂಡನ್ ಗೌಡ'ನಿಗೆ ಜತೆಯಾದ ವಿ ಮನೋಹರ್

Subscribe to Filmibeat Kannada
Music director V Manohar
ಉಪೇಂದ್ರ ನಿರ್ದೇಶನದ 'ತರ್ಲೆ ನನ್ಮಗ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ವಿ.ಮನೋಹರ್ ಅವರಿಗೆ ಉತ್ತಮ ಬ್ರೇಕ್ ಸಿಕ್ಕಿತ್ತು. ಉಪೇಂದ್ರ ಅವರು ನಾಯಕ ನಟನಾಗಿ ಬದಲಾದ ಮೇಲೆ ಇವರಿಬ್ಬರ ಕಾಂಬಿನೇಷನಲ್ಲಿ ಚಿತ್ರ ಬರಲೇ ಇಲ್ಲ. ಉಪೇಂದ್ರ ನಟಿಸುತ್ತಿರುವ ಇಪ್ಪತ್ತೈದನೇ ಚಿತ್ರ 'ಲಂಡನ್ ಗೌಡ'ನಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಇಬ್ಬರೂ ಈಗ ಮತ್ತೆ ಒಂದಾಗುತ್ತಿದ್ದಾರೆ.

'ಲಂಡನ್ ಗೌಡ'ನಿಗೆ ಉಪೇಂದ್ರ ಅವರದೇ ಕತೆ, ಚಿತ್ರಕತೆ ಮತ್ತು ಸಂಭಾಷಣೆ. ಚಿತ್ರದ ನಾಯಕ ನಟ ಸಹ ಅವರೇ. ಉಳಿದಂತೆ ಎನ್ ಆರ್ ಶೆಟ್ಟಿ ನಿರ್ಮಿಸುತ್ತ್ತಿರುವ ಈ ಚಿತ್ರದ ನಾಯಕಿಯಾಗಿ ಸ್ನೇಹಾ ಉಲ್ಲಾಳ್ ಆಯ್ಕೆಯಾಗಿರುವುದು ಗೊತ್ತೇ ಇದೆ.

ಇದೇ ಮೊದಲ ಬಾರಿಗೆ ಈ ಚಿತ್ರವನ್ನು ಯತೀಶ್ ಅಳ್ವ ಎಂಬುವವರು ನಿರ್ದೇಶಿಸಲಿದ್ದಾರೆ. 'ಸರ್ಫರೋಶ್' ಚಿತ್ರಕ್ಕೆ ಜಾನ್ ಮ್ಯಾಥ್ಯು ಮಾಥಮ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಆಳ್ವ ಅವರಿಗಿದೆ. ಛಾಯಾಗ್ರಹಣ ಸಂತೋಷ್ ಪತಾಜೆ. ಚಿತ್ರವನ್ನು ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಆದರೂ ಕನ್ನಡ ಚಿತ್ರೋದ್ಯಮದಲ್ಲಿ ಲಂಡನ್ ಗೌಡ ಚಿತ್ರ ಕುತೂಹಲ ಮೂಡಿಸಿದೆ. ಮೇ ಮೂರನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲಂಡನ್ ಗೌಡನಿಗೆ ಜತೆಯಾದ ಉಲ್ಲಾಳದ ಸ್ನೇಹ!
ಉಪೇಂದ್ರ ರಜನಿ ಚಿತ್ರದಲ್ಲಿ ಆರತಿ ಛಾಬ್ರಿಯಾ
ಅಮೀರ್ ಖಾನ್ ನೆನಪಿಸುವ ಉಪೇಂದ್ರ: ಸೆಲೀನಾ
ಹೈದರಾಬಾದ್‌ನಲ್ಲಿ ಉಪೇಂದ್ರ ಅವರ ಶ್ರೀಮತಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada