»   » ಮಾಸ್ಟರ್ ಕಣ್ಣೀರು ಕಂಡು ಸಾಯೋಕೋದ

ಮಾಸ್ಟರ್ ಕಣ್ಣೀರು ಕಂಡು ಸಾಯೋಕೋದ

Posted By:
Subscribe to Filmibeat Kannada

'ಪುತ್ರಶೋಕಂ ನಿರಂತರಂ ' ಎಂಬ ಉಕ್ತಿಯಂತೆ ಕರ್ನಾಟಕ ಸುಪುತ್ರ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಅಗಲಿಕೆಯ ನೋವು ಸಾರ್ವಜನಿಕವಾಗಿ ತಗ್ಗಿದ್ದರೂ, ಅವರ ಕಟ್ಟಾಭಿಮಾನಿಗಳು ಮಾತ್ರ ಹೃದಯದಲ್ಲೇ ನೋವನ್ನು ಅಡಗಿಸಿಕೊಂಡು ವಿಷ್ಣು ಅವರನ್ನು ಚಿತ್ರಗಳಲ್ಲಿ ಕಾಣುತ್ತಾ ಕಾಲದೂಡುತ್ತಿದ್ದಾರೆ. ಅದರಲ್ಲೂ ವಿಷ್ಣು ಅವರು ಕಾಲವಾದ ನಂತರ ಇತ್ತೀಚಿಗೆ ಬಿಡುಗಡೆಗೊಂಡ ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಸಾವು ನೋವು ಗರಿಷ್ಠ ಪ್ರಮಾಣದಲ್ಲಿ ತೆರೆಯನ್ನು ಆವರಿಸಿರುವ ಪರಿಣಾಮ ಅಭಿಮಾನಿಗಳ ಎದೆಯಾಳದ ನೋವು ಒಂದಲ್ಲ ಒಂದು ಸ್ಫೋಟಗೊಳ್ಳುತ್ತಲೇ ಇದೆ.

ಇದಕ್ಕೆ ನಿದರ್ಶನ ಎಂಬಂತೆ ಡಾ. ವಿಷ್ಣುವರ್ಧನ್ ಅಗಲಿಕೆಯಿಂದ ನೊಂದ ಅಭಿಮಾನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ. ತಿಪಟೂರಿನ ದೊಡ್ಡಪೇಟೆಯ ಆಟೋಚಾಲಕ ಸುಂದರ್ ಆತ್ಮಹತ್ಯೆಗೆ ಯತ್ನಿಸಿದವ. ವಿಷ್ಣು ಸಿನಿಮಾಗಳನ್ನು ನೋಡುತ್ತಿದ್ದ ಈತ ತನ್ನ ಆಟೋಗೆ ವಿಷ್ಣು ಫೋಟೋಗಳನ್ನು ಅಂಟಿಸಿದ್ದ. ವಿಷ್ಣು ಚಿತ್ರಗಳನ್ನು ತಪ್ಪದೇ ತಾನು ನೋಡಿ ತನ್ನ ಸ್ನೇಹಿತರಿಗೂ ತೋರಿಸುತ್ತಿದ್ದ.

ವಿಡಿಯೋ:ಡಾ. ವಿಷ್ಣುವರ್ಧನ್ ಅಗಲಿಕೆ, ಆಘಾತ

ವಿಷ್ಣು ಅಗಲಿಕೆ ದಿನದಿಂದ ಮನೆಯಲ್ಲಿ ಅವರ ಭಾವಚಿತ್ರವಿಟ್ಟು ಪೂಜೆ ಮಾಡುತ್ತಿದ್ದ. ಸ್ಕೂಲ್ ಮಾಸ್ಟರ್ ಚಿತ್ರ ವೀಕ್ಷಿಸಿ ಮನೆಗೆ ಬಂದ ಸುಂದರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಪೋಷಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜಿಲ್ಲಾ ವಿಷ್ಣು ಸೇನಾ ಸಮಿತಿ ಆರ್. ಸಾಧ್ವೀನ್‌ಕುಮಾರ್ ಸೇರಿದಂತೆ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿ ಸುಂದರ್ ಆರೋಗ್ಯ ವಿಚಾರಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada