»   »  ಬೆಂಗಳೂರು ಟೆಕ್ಕಿ ಕೈಹಿಡಿಯಲಿದ್ದಾರೆ ನಟಿ ಮೀನಾ!

ಬೆಂಗಳೂರು ಟೆಕ್ಕಿ ಕೈಹಿಡಿಯಲಿದ್ದಾರೆ ನಟಿ ಮೀನಾ!

Subscribe to Filmibeat Kannada
Wedding bells for Meena!
ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ ಮೀನಾ ಅವರಿಗೆ ಕಂಕಣ ಬಲ ಕೂಡಿಬಂದಿದೆ. ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ವಿದ್ಯಾಸಾಗರ್ ಅವರ ಕೈಹಿಡಿಯಲಿದ್ದಾರೆ ನಟಿ ಮೀನಾ. ಚೆನ್ನೈನಲ್ಲಿರುವ ಮೀನಾ ಅವರ ಮನೆಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ಈಗಾಗಲೇ ಮುಗಿದಿದೆ. ಕೇವಲ ತಮ್ಮ ಆಪ್ತರು ಮತ್ತು ಕುಟುಂಬ ಸದಸ್ಯರಿಗೆ ಮಾತ್ರ ಆಹ್ವಾನವಿದ್ದ ಈ ನಿಶ್ಚಿತಾರ್ಥ ಕಾರ್ಯಕ್ರಮ ತುಂಬ ಖಾಸಗಿ ಕಾರ್ಯಕ್ರಮವಾಗಿತ್ತು.

ಮೀನಾ ಮತ್ತು ವಿದ್ಯಾಸಾಗರ್ ಅವರ ಮದುವೆ ಜುಲೈ 12ರಂದು ತಿರುಪತಿಯಲ್ಲಿ ನಡೆಯಲಿದ್ದು ಜುಲೈ 14ರಂದು ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಹಮ್ಮಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿದ ಮೀನಾ ಅವರು ಕನ್ನಡ, ತೆಲುಗು ಮತ್ತು ತಮಿಳಿನ 175 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್, ಶಿವಾಜಿ ಗಣೇಶನ್ ಮೊದಲಾದ ದಕ್ಷಿಣದ ಖ್ಯಾತ ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ಮೀನಾ ಅವರದು.

ಸುದೀಪ್ ಜತೆಗೆ ಸ್ವಾತಿಮುತ್ತು ಮತ್ತು ಮೈ ಆಟೋ ಗ್ರಾಫ್ ಹಾಗೂ ರವಿಚಂದ್ರನ್ ಜತೆ ಪುಟ್ನಂಜ ಕನ್ನಡ ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕುಚೇಲನ್ ಮತ್ತು ವಿಜಯ್ ಅವರ ಜತೆ ನಟಿಸಿದ ಮರ್ಯಾದೈ ಚಿತ್ರಗಳು ಆಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದವು.ಈಗ ತಮಿಳು ಕಿರುತೆರೆಯಲ್ಲೂ ಮಿನುಗುತ್ತಿದ್ದಾರೆ ನಟಿ ಮೀನಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ
ಅದ್ದೂರಿಯಾಗಿ ರಾಕ್ ಲೈನ್ ಮಗನ ಮದುವೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada