ಬೆಂಗಳೂರಿನಲ್ಲಿ ನಟಿ ಯಮುನಾ ದಿಢೀರ್ ಪ್ರತ್ಯಕ್ಷ
ಬಹುಭಾಷಾ ತಾರೆ ಯಮುನಾ ಇತ್ತೀಚೆಗೆ ಬ್ರೇಕಿಂಗ್ ಸುದ್ದಿ ಮಾಡಿದ್ದು ಗೊತ್ತೇ ಇದೆ. ಈಗವರು ಬೆಂಗಳೂರಿನಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ತೆಲುಗು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಆಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಜನಪ್ರಿಯ ಚಿತ್ರಮಂದಿರವೊಂದರಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದ್ದು ಯಮುನಾ ಕೂಡ ಪಾಲ್ಗೊಂಡಿದ್ದಾರೆ.
ಅಚ್ಚರಿ ಸಂಗತಿ ಎಂದರೆ, ಈ ಚಿತ್ರದ ನಿರ್ಮಾಪಕರು ಎಸ್ ವಿ ಬಾಬು. ಕನ್ನಡದಲ್ಲಿ ವಿಜಯ ಪತಾಕೆ ಹಾರಿಸಿದ 'ಜೋಶ್' ಚಿತ್ರವನ್ನು ಅವರು ತೆಲುಗಿನಲ್ಲಿ ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಯಮುನಾ ಮುಖ್ಯಪಾತ್ರವನ್ನು ಪೋಷಿಸುತ್ತಿದ್ದಾರೆ.
ಚಿತ್ರದ ನಾಯಕನಿಗೆ ಯಮುನಾ ತಾಯಿಯಾಗಿ ಕಾಣಿಸಲಿದ್ದಾರೆ. ಇದೇ ಚಿತ್ರ ತಮಿಳು ಭಾಷೆಗೆ ಡಬ್ ಆಗಲಿದೆ. ಪ್ರಣಯರಾಜ ಶ್ರೀನಾಥ್, ಸ್ಫೂರ್ತಿ, ಪ್ರವೀಣ್, ಯತಿ (ಜಗ್ಗೇಶ್ ಪುತ್ರ), ಅಲೋಕ್, ರವೀಂದ್ರನಾಥ್, ಕವಿತಾ, ವಾಣಿಶ್ರೀ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ತೆಲುಗಿನ ನಿರ್ದೇಶಕ ಭೀಮನೇನಿ ಶ್ರೀನಿವಾಸ್ ರಾವ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್ ಸಹೋದರ ಪಟ್ನಾಯಕ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ. ತಮಿಳಿನ ಕೆಲವು ನಟರು ಚಿತ್ರದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











