»   »  ಅಂತರ್ಜಾಲಕ್ಕೆ ನಟಿ ಪೂಜಾಗಾಂಧಿ ಲಗ್ಗೆ!

ಅಂತರ್ಜಾಲಕ್ಕೆ ನಟಿ ಪೂಜಾಗಾಂಧಿ ಲಗ್ಗೆ!

Posted By:
Subscribe to Filmibeat Kannada
'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ ಪೂಜಾಗಾಂಧಿ ಇಂದು ಬಲು ಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ದಾಖಲೆ ಗಳಿಕೆಯೊಂದಿಗೆ ಕನ್ನಡ ಚಿತ್ರೋದ್ಯಮದ 75 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಂತಂಹ ಚಿತ್ರ ಮುಂಗಾರು ಮಳೆ ಎಂಬುದು ಗೊತ್ತೇ ಇದೆ.

ಅಂತಹ ಚಿತ್ರದ ನಾಯಕಿ ಪೂಜಾಗಾಂಧಿ ಇದುವರೆಗೂ ಹಲವಾರು ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ. ತಾವು ನಟಿಸಿದ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಅವರದೇ ಆದ ವೆಬ್ ಸೈಟನ್ನು ಆರಂಭಿಸಿದ್ದಾರೆ.

''ನನ್ನ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಈ ವೈಬ್ ಸೈಟ್ ಸಹಕರಿಸುತ್ತದೆ'' ಎಂದು ಏಪ್ರಿಲ್ 29, 2009ರಂದು ವೆಬ್ ಸೈಟನ್ನು ಉದ್ಘಾಟಿಸಿದ ಬಳಿಕ ಪೂಜಾಗಾಂಧಿ ಪ್ರತಿಕ್ರಿಯಿಸಿದರು. ಈ ವೆಬ್ ಸೈಟಿನಲ್ಲಿ ಪೂಜಾಗಾಂಧಿ ಕುರಿತ ವೈಯಕ್ತಿಕ ವಿವರಗಳು, ಆಸಕ್ತಿಕರ ವಿಚಾರಗಳು, ಅಭಿಮಾನಿ ಬಳಗ (ಫ್ಯಾನ್ಸ್ ಕ್ಲಬ್) ಇದೆ. ಪೂಜಾಗಾಂಧಿ ಅವರೊಂದಿಗೆ ಇಮೇಲ್ ನಲ್ಲಿ ಸಂಪರ್ಕಿಸಬಹುದು. ಪೂಜಾಗಾಂಧಿ ವೆಬ್ ಸೈಟ್

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada