»   »  ಗೋಲ್ಡನ್ ಸ್ಟಾರ್ ಸಹೋದರ ಮಹೇಶ್ ಬೆಳ್ಳಿತೆರೆಗೆ

ಗೋಲ್ಡನ್ ಸ್ಟಾರ್ ಸಹೋದರ ಮಹೇಶ್ ಬೆಳ್ಳಿತೆರೆಗೆ

Subscribe to Filmibeat Kannada
Shilpa, Ganesh and Mahesh
ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಮಹೇಶ್ ಬೆಳ್ಳಿತೆರೆಗೆ ಶೀಘ್ರದಲ್ಲೇ ಅಡಿಯಿಡಲಿದ್ದಾರೆ. ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು ಅವರ ಪ್ರೇಮ್ ಕಹಾನಿ ಚಿತ್ರದಲ್ಲಿ ಮಹೇಶ್ ನಟಿಸಬೇಕಾಗಿತ್ತು. ಸಂಭಾವ್ಯ ನಾಯಕರ ಪಟ್ಟಿಯಲ್ಲಿದ್ದ ಮಹೇಶ್ ಯಾಕೋ ಏನೋ ಪ್ರೇಮ್ ಕಹಾನಿ ಚಿತ್ರಕ್ಕೆ ಆಯ್ಕೆಯಾಗಲಿಲ್ಲ. ಆ ಚಿತ್ರಕ್ಕೆ ಅಜಯ್ ಆಯ್ಕೆಯಾಗಿದ್ದರು.

ಮಹೇಶ್ ಗೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕ ಪ್ರೇಮ್ ಅವರ ಸಹಾಯಕ ಸಂತು ಸ್ವತಂತ್ರ ನಿರ್ದೇಶನದಲ್ಲಿ ಮಹೇಶ್ ಚಿತ್ರ ಸೆಟ್ಟೇರಲಿದೆ. ಈಗ್ಗೆ ಮೂರು ನಾಲ್ಕು ತಿಂಗಳ ಹಿಂದೆಯೇ ಮಹೇಶ್ ಚಿತ್ರದ ಬಗ್ಗೆ ಸಿದ್ಧತೆಗಳು ನಡೆದಿದ್ದವು.ಮುಹೂರ್ತದ ದಿನ ವಿಷಯ ತಿಳಿಸಲು ಚಿಂತಿಸಲಾಗಿತ್ತು. ಆದರೆ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಅದು ಹೇಗೋ ವಿಷಯ ಲೀಕ್ ಆಗಿ ಗಾಂಧಿನಗರದಲ್ಲಿ ಸುದ್ದಿಯಾಗಿದೆ.

ಮಹೇಶ್ ಗೆ ಜತೆಯಾಗಿ ನಿಕಿತಾ ಆಯ್ಕೆಯಾಗುವ ಸಾಧ್ಯತೆಗಳಿವೆ. 'ಬಿರುಗಾಳಿ' ಮಧುರ ಹಾಡುಗಳ ಅರ್ಜುನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. 'ಸವಾರಿ'ಯ ಮಂಜು ಮಾಂಡವ್ಯ ಅವರ ಸಂಭಾಷಣೆ ಚಿತ್ರಕ್ಕೆ ಇರುತ್ತ್ತದೆ. ಉಳಿದ ತಾರಾಗಣದ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ. ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada