»   »  ಚಿತ್ರಮಂದಿರಗಳಿಗೆ ಈ ವಾರ 'ಸೀನ'ನ ಆಗಮನ

ಚಿತ್ರಮಂದಿರಗಳಿಗೆ ಈ ವಾರ 'ಸೀನ'ನ ಆಗಮನ

Subscribe to Filmibeat Kannada
ನಾಯಕ ತರುಣ್ ಅಭಿನಯದ ಸೀನ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಉತ್ತಮ ಸ್ಥಳಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರವನ್ನು ಬಸವರಾಜ್ ಬಳ್ಳಾರಿ ನಿರ್ದೇಶಿಸಿದ್ದಾರೆ. 'ಪ್ರೇಮವನ್ನು ವಿಶೇಷ ರೀತಿಯಲ್ಲಿ ಈ ಚಿತ್ರದ ಮೂಲಕ ತೋರ ಹೊರಟಿದ್ದು, ಯುವ ಪ್ರೇಮಿಗಳ ಹೃದಯಕ್ಕೆ ಸೀನ' ಲಗ್ಗೆ ಹಾಕಲಿದ್ದಾನೆ' ಎಂದು ನಿರ್ದೇಶಕರು ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ.

ಚಿತ್ರದ ಪ್ರಚಾರದ ಕಡೆ ಸಾಕಷ್ಟು ಗಮನ ಹರಸಿರುವ ನಿರ್ಮಾಪಕರು ನಗರದ ಓಕಳಿಪುರಂ ಮುಖ್ಯರಸ್ತೆಯಲ್ಲಿ ಅತೀ ದೊಡ್ಡ ವಿನಾಯಿಲ್ ಹಾಕಿಸಿ ವಿನೂತನ ಪ್ರಚಾರಕ್ಕೆ ಮುಂದಾಗಿದ್ದಾರೆ. ಚಿತ್ರದ ಹಾಡುಗಳಿಗೂ ಉತ್ತಮ ಬೇಡಿಕೆ ಇದೆ ಎಂದು ಆನಂದ್ ಆಡಿಯೋ ಮಾಲೀಕರು ತಿಳಿಸಿದ್ದಾರೆ. ಬೇಸಿಗೆಯ ರಜೆಯಲ್ಲಿ ಸೀನ' ರಂಜನೆಯ ರಸದೌತಣ ನೀಡಲಿದ್ದಾನೆ.

ಅಂಕಿತ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುರುಳಿ ಮತ್ತು ಕುಪ್ಪುರಾಜ್ ನಿರ್ಮಿಸಿರುವ ಈ ಚಿತ್ರದಲ್ಲಿ ತರುಣ್‌ಗೆ ನಾಯಕಿಯರಾಗಿ ಪ್ರಿಯಾಂಕ ಹಾಗೂ ಅಂತರಾ ರೆಡ್ಡಿ ಅಭಿನಯಿಸಿದ್ದಾರೆ. ಬಸವರಾಜ ಬಳ್ಳಾರಿ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹಣವಿದೆ.

ಎ.ಟಿ.ರವೀಶ್ ಸಂಗೀತ, ನಾಗೇಂದ್ರ ಅರಸ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಇಮ್ರಾನ್, ಪರಮೇಶ್, ಹರ್ಷ ನೃತ್ಯ, ಚೆನ್ನಯ್ಯ ನಿರ್ಮಾಣನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ತರುಣ್, ಪ್ರಿಯಾಂಕ, ಅಂತರಾ ರೆಡ್ಡಿ, ರಮೇಶ್ ಭಟ್, ಕಿಶೋರಿ ಬಲ್ಲಾಳ್, ಮೈಕೋ ನಾಗರಾಜ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ನೀನಾಸಂ ಅಶ್ವತ್, ಸೂರ್ಯಕಿರಣ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡಸಿನಿವಾರ್ತೆ)

ಚಿತ್ರೀಕರಣ ಮುಗಿಸಿಕೊಂಡ ಸೀನ ಸೆನ್ಸಾರ್ ಮುಂದೆ
ಸೀನ ಚಿತ್ರಕ್ಕಾಗಿ ರು.4 ಲಕ್ಷದ ದಾಖಲೆ ಭಿತ್ತಿಪತ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada