For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಚಿತ್ರಾಪುರದ ಅಮೃತಾ ವಿವಾಹ್

  By Staff
  |
  ಕರ್ನಾಟಕದ ಚಿತ್ರಾಪುರ ಮೂಲದ ಬಾಲಿವುಡ್ ಬೆಡಗಿ ಅಮೃತಾ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ತೆಲುಗಿನ ಮಹೇಶ್ ಬಾಬು ಜೋಡಿ ಅತಿಥಿ(athidhi?) ಚಿತ್ರ ಬಿಟ್ಟರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಈಗ ಅವರದೇ ಹಿಂದಿ ಚಿತ್ರದ ಕನ್ನಡ ರಿಮೇಕ್ ನಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲಿ ಅಮೃತಾಗೆ ಹೆಸರು ತಂದಕೊಟ್ಟ 'ವಿವಾಹ್' ಚಿತ್ರ ಕನ್ನಡದಲ್ಲಿ 'ನಾತಿಚರಮಿ' ಎಂಬ ಹೆಸರಲ್ಲಿ ಬರಲಿದೆ. ಜೆಪಿಆರ್ ಪ್ರೋಡಕ್ಷನ್ ನ ಜಯಪ್ರಕಾಶ್ ರೆಡ್ಡಿ ಅವರಿಗಾಗಿ ಕೃಷ್ಣಬ್ರಹ್ಮ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

  ನಿರ್ದೇಶಕ ಕೃಷ್ಣಬ್ರಹ್ಮರ 'ಯಜ್ಞ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸಾಲುಸಾಲು ಚಿತ್ರಗಳು ಬಿಡುಗಡೆಯಾಗಲು ಕಾದಿರುವುದರಿಂದ ಚಿತ್ರಮಂದಿರ ಸಿಗದೇ ತಡವಾಗುತ್ತಿದೆಯಂತೆ. ಅಮೃತಾ ರಾವ್ ಗೆ ನಾಯಕನಾಗಿ ಹೊಸ ನಟ ನಿರಾನ್ ನಟಿಸಲಿದ್ದಾರೆ. ನಟಿ ಸಂಭ್ರಮ ಪೋಷಕ ಪಾತ್ರದಲ್ಲಿ ಕಾಣಿಸಲಿದ್ದಾರೆ. ನಾತಿಚರಮಿ ಚಿತ್ರ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಲಿದೆ. ಜ.6 ರ ನಂತರ ಶೂಟಿಂಗ್ ಪ್ರಾರಂಭಿಸಲಿದ್ದೇವೆ ಎಂದು ಕೃಷ್ಣ ಬ್ರಹ್ಮ ಹೇಳುತ್ತಾರೆ.

  ಬಾಲಿವುಡ್ ನಟಿಯರು ಕನ್ನಡಕ್ಕೆ ಬಂದರೆ, ಅವರಿಗೆ ನೀಡುವ ಸಂಭಾವನೆ ಮೊತ್ತದ ಮೇಲೆ ಗಾಂಧಿನಗರ ಕಣ್ಣಿಟ್ಟಿರುತ್ತದೆ. ಆದರೆ ಈ ಬಗ್ಗೆ ವಿಷಯ ಬಿಟ್ಟುಕೊಡದ ನಿರ್ದೇಶಕರು 55ಲಕ್ಷಕ್ಕಿಂತ ಕಮ್ಮಿಯಂತೂ ಕೊಟ್ಟಿಲ್ಲ ಎಂದಷ್ಟೇ ಹೇಳಿದರು. ಅಮೃತಾ ರಾವ್ ಬಾಲಿವುಡ್ ನಲ್ಲಿ ಬೇಡಿಕೆಯ ನಟಿ, ಶಾರುಖ್, ಶಹೀದ್, ಅಜಯ್ ದೇವಗನ್ ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿರುವಾಕೆ. ಅವರ ಜತೆ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಆಕೆ ತನ್ನೊಡನೆ ಪ್ರತ್ಯೇಕ ಮೇಕಪ್ ಕಲಾವಿದರು ಹಾಗೂ ವಸ್ತ್ರ ವಿನ್ಯಾಸಕರನ್ನು ಕರೆತರಲಿದ್ದಾರೆ ಎಂದು ನಿರ್ದೇಶಕ ಕೃಷ್ಣಬ್ರಹ್ಮ ತಿಳಿಸಿದರು.

  ಅಮೃತಾ ಬಗ್ಗೆ ಚುಟುಕಾಗಿ:
  ಕರ್ನಾಟಕದ ಚಿತ್ರಾಪುರದಲ್ಲಿ ದೀಪಕ್ ರಾವ್ ದಂಪತಿಗಳಿಗೆ ಜನಿಸಿದ ಕೊಂಕಣಿ ಹುಡುಗಿ ಅಮೃತಾರಾವ್, ಮುಂಬೈನಲ್ಲಿ ಸೈಕಾಲಜಿ ಪದವಿ ಪಡೆದಿದ್ದಾರೆ. ಕೊಂಕಣಿ ಸೇರಿದಂತೆ ಹಿಂದಿ, ಮರಾಠಿ, ಇಂಗ್ಲೀಷ್ ನಲ್ಲಿ ಮಾತಾಡಬಲ್ಲ 27 ವರ್ಷದ ರೂಪದರ್ಶಿ ಕಮ್ ನಟಿ ಈಕೆ. ಕ್ಯಾಡ್ ಬರೀಸ್ ಪರ್ಕ್, ಬ್ರೂ ಕಾಫಿ ಸೇರಿದಂತೆ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಅಬ್ ಕೆ ಬರಸ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಅಮೃತಾ , ಇಷ್ಕ್ ವಿಷ್ಕ್ , ಮಸ್ತಿ,ಪ್ಯಾರೆ ಮೋಹನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮೈಹೂನಾ, ವಿವಾಹ್ , ವೆಲ್ ಕಮ್ ಟು ಸಜ್ಜನ್ ಪುರ್ ಇವರಿಗೆ ಹೆಸರು ತಂದು ಕೊಟ್ಟ ಚಿತ್ರ. ವಿಕ್ಟರಿ ಚಿತ್ರ ಬಿಡುಗಡೆಯಾಗಬೇಕಿದೆ. ಎರಡು ಫಿಲ್ಮ್ಮಂಫೇರ್ , ಐಫಾ, ಜೀ ಸಿನಿ ಅವಾರ್ಡ್, ಸ್ಟಾರ್ ಸ್ಮ್ಕ್ರೀನ್ ಪ್ರಶಸ್ತಿ, ಸ್ಟಾರ್ ಡಸ್ಟ್ ಪ್ರಶಸ್ತಿ ಜತೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಯನ್ನು ಅಮೃತಾ ಗಳಿಸಿದ್ದಾರೆ.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X