For Quick Alerts
  ALLOW NOTIFICATIONS  
  For Daily Alerts

  ನಾಳೆಯಿಂದ 'ಶಕ್ತಿ' ಪ್ರದರ್ಶನ ಮಾಡಲಿರುವ ಮಾಲಾಶ್ರೀ

  |

  ಒಂದು ಕಾಲದಲ್ಲಿ ದಶಕಗಳ ಕಾಲ ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ನಟಿ ಮಾಲಾಶ್ರೀ, ನಾಳೆಯಿಂದ ಮತ್ತೆ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಅಂದರೆ ಮಾಲಾಶ್ರೀ ಅಭಿನಯದ ಚಿತ್ರ 'ಶಕ್ತಿ' ನಾಳೆಯಿಂದ (06, 2011) ಬೆಂಗಳೂರಿನ ಕಪಾಲಿ ಹಾಗೂ ರಾಜ್ಯಾದ್ಯಂತ ಪ್ರದರ್ಶನ ಕಾಣಲಿದೆ.

  ಒಟ್ಟೂ 112 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಮಾಲಾಶ್ರೀ ಚಿತ್ರ ಶಕ್ತಿ, ಸಾಕಷ್ಟು ನಿರೀಕ್ಷೆಗಳನ್ನಂತೂ ಹುಟ್ಟುಹಾಕಿದೆ. ಕಾರಣ ಮಾಲಾಶ್ರೀಗೆ ಈಗಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಜೊತೆಗೆ ಬಿ ಮತ್ತು ಸಿ ಕೇಂದ್ರಗಳಿಂದ ಮಾಲಾಶ್ರೀ ಚಿತ್ರಕ್ಕೆ ಈಗಲೂ ಸಾಕಷ್ಟು ಬೇಡಿಕೆಯಿದೆ.

  ಮಾಲಾಶ್ರೀ ಚಿತ್ರಗಳಿಂದ ಬಿ ಮತ್ತು ಸಿ ಕೇಂದ್ರಗಳ ಮೂಲಕ ಬಾಕ್ಸ್ ಆಫೀಸ್ ಗೆ ಹಣದ ಹೊಳೆಯೇ ಹರಿದುಬರುತ್ತಿದೆ. ಈಗಲೂ ಉತ್ತರ ಕರ್ನಾಟಕ ಹಾಗೂ ರಾಜ್ಯದ ಹಲವು ಕೇಂದ್ರಗಳಲ್ಲಿ ಮಾಲಾಶ್ರೀ ಚಿತ್ರ ಉತ್ತಮ ಆರಂಭ ಹಾಗೂ ನೂರು ದಿನ ಪ್ರದರ್ಶನ ಕಾಣುತ್ತವೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಕಿರಣ್ ಬೇಡಿ ಇದಕ್ಕೆ ಸಾಕ್ಷಿ. ಒಟ್ಟಿನಲ್ಲಿ ನಾಳೆಯಿಂದ ಮಾಲಾಶ್ರೀ ಅಭಿಮಾನಿಗಳಿಗೆ ಫುಲ್ ಖುಷಿ. (ಒನ್ ಇಂಡಿಯಾ ಕನ್ನಡ)

  English summary
  Actrees Malashri movie Shakthi is releasing tomorrow, on Jan 06, 2012 in all over Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X