»   » ನೂರು ಮಂದಿ ಪ್ರಭಾವಿತರಲ್ಲಿ ಏಕೈಕ ಭಾರತೀಯೆ

ನೂರು ಮಂದಿ ಪ್ರಭಾವಿತರಲ್ಲಿ ಏಕೈಕ ಭಾರತೀಯೆ

Posted By:
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ಮುಡಿಗೆ ಮತ್ತೊಂದು ಗರಿ ಮೂಡಿದೆ. ಪ್ರತಿಷ್ಠಿತ ಟೈಮ್ ನಿಯತಕಾಲಿಕೆಯ ಟಾಪ್ ನೂರು ಮಂದಿ ಪ್ರಭಾವಿತರ ಪಟ್ಟಿಯಲ್ಲಿ ಐಶ್ವರ್ಯ ರೈಗೆ ಸ್ಥಾನ ಧಕ್ಕಿದೆ. ಕಂಡೋಲೀಸಾ ರೈಸ್, ಸ್ಟೆಲ್ಲಾ ಮ್ಯಾಕ್ ಕಾರ್ಟ್ ನಿ, ನೋರಾ ರಾಬರ್ಟ್ ಸೇರಿದಂತೆ ವಿಶ್ವದ ಹಲವು ಖ್ಯಾತ ಮಹಿಳೆಯರು ಪಟ್ಟಿಯಲ್ಲಿ ಐಶ್ ಸ್ಥಾನ ಪಡೆದಿರುವುದು ವಿಶೇಷ.

ಐಶ್ವರ್ಯ ರೈ ಹಂತ ಹಂತವಾಗಿ ಮೇಲಕ್ಕೆ ಬಂದವರು. ಆಕೆ ಸಿನಿಮಾ ಮಾಧ್ಯಮಕ್ಕೆ ಅಡಿಯಿಟ್ಟಾಗ ಆರಂಭದಲ್ಲಿ ಗುಣಾತ್ಮಕ ಚಿತ್ರಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಇಂದಿಗೂ ಐಶ್ವರ್ಯ ರೈ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ. ಹಾಗಾಗಿಯೇ ಅವರು ಅತಿ ಎತ್ತರಕ್ಕೆ ಏರಲು ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ಐಶ್ವರ್ಯ ರೈ ಹತ್ತಿರದ ಸಂಬಂಧಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ಪಟ್ಟಿಯಲ್ಲಿ ವಿಶ್ವದ ಹಲವು ಪ್ರಸಿದ್ಧ ಮಹಿಳೆಯರು ಸ್ಥಾನ ಸಂಪಾದಿಸಿದ್ದಾರೆ. ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿರುವ ಏಕೈಕ ಭಾರತೀಯ ಮಹಿಳೆ ಐಶ್ವರ್ಯ ರೈ. ಐಶ್ವರ್ಯ ರೈಗೆ ದೊರಕಿರುವ ಅತಿ ದೊಡ್ಡ ಮನ್ನಣೆಯಿದು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಶ್ವರ್ಯ ರೈ ಅವರನ್ನು ಉತ್ತಮ ಪಾತ್ರಗಳು ಹುಡುಕಿಕೊಂಡು ಬರುವ ಸಾಧ್ಯತೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada