twitter
    For Quick Alerts
    ALLOW NOTIFICATIONS  
    For Daily Alerts

    ಮದುವೆ ಮನೆ ನಾಯಕಿ ಮೂಢನಂಬಿಕೆ ಪ್ರತೀಕವೇ?

    |

    ಚಿತ್ರರಂಗಕ್ಕೂ ಮೂಢನಂಬಿಕೆಗೂ ಎಲ್ಲಿಲ್ಲದ ನಂಟು. ಗೊತ್ತಿಲ್ಲದ ಕಾರಣ, ಪರಿಣಾಮಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ 'ಮದುವೆ ಮನೆ' ಚಿತ್ರದ ನಾಯಕಿಯ ಆಯ್ಕೆ ಮೂಢನಂಬಿಕೆಯ ಪ್ರತೀಕ ಎಂದೆನ್ನಿಸದೇ ಇರಲಾರದು. ಸಾಕ್ಷಾತ್ ಪೂಜಾ ಗಾಂಧಿಯ ತಂಗಿಯಂತೆ ಕಾಣುತ್ತಾರೆ ಮತ್ತು ನಟಿಸುತ್ತಾರೆ ಶ್ರದ್ಧಾ ಆರ್ಯ. ಪೂಜಾ ಗಾಂಧಿಯಂತಿದ್ದರೆ ಸಿನಿಮಾ ಹಿಟ್ ಆಗುತ್ತಾ?

    ಅದು ಹಾಗಿರಲಿ, ಗಾಂಧಿನಗರ ಪಾಲಿಸಿಕೊಂಡು ಬಂದ ತತ್ವಗಳಲ್ಲೊಂದು ಸೂಪರ್ ಹಿಟ್ ಚಿತ್ರದ ನಟ, ನಟಿಗೆ ಕೈತುಂಬಾ ಅವಕಾಶ. ಅವರ ಅಭಿನಯ ಸಾಕಷ್ಟು ಬಾರಿ ಅಲ್ಲಿ ಗೌಣ. ಪ್ರತಿಭೆಯಿದ್ದವರು ನಂತರದ ಅವಕಾಶಗಳಲ್ಲಿ ಬೆಳೆಯುತ್ತಾರೆ, ಉಳಿದವರು ಇರುವಲ್ಲಿಯೇ ಅಥವಾ ಇರಬಾರದಂತೆ ಇರುತ್ತಾರೆ. ಆದರೆ ಎಲ್ಲರಿಗೂ ಆ ನಾಯಕಿಯೇ ಬೇಕು. ಅದು ಎಷ್ಟೋ ಸಾರಿ ಮೂಢನಂಬಿಕೆ ಅನ್ನಿಸುತ್ತಿದೆ.

    ಮದುವೆ ಮನೆಯನ್ನು ಬಿಡುಗಡೆಗಿಂತ ಮೊದಲು ಇನ್ನೊಂದು ಮುಂಗಾರು ಮಳೆ ಎಂದೇ ಬಿಂಬಿಸಲಾಗುತ್ತಿತ್ತು. ನಾಯಕಿ ಶ್ರದ್ಧಾ ಆರ್ಯಾಳನ್ನು ಅದಕ್ಕೇ ಕರೆತರಲಾಗಿದೆ ಎನ್ನಬಹುದು. ಸಿನಿಮಾ ಕೂಡ ಅಷ್ಟೇ. ಇನ್ನೊಂದು ಮುಂಗಾರು ಮಳೆ ಮಾಡುವ ಪ್ರಯತ್ನ ಎಂಬುದು ಸ್ಪಷ್ಟ. ಇದು ಪ್ರಯತ್ನವೋ, ಯಶಸ್ವಿಯೋ ಎಂಬುದು ಸ್ವಲ್ಪ ದಿನದಲ್ಲಿ ತಿಳಿಯಲಿದೆ. ಮೂಢ ನಂಬಿಕೆ ಬಿಟ್ಟು, ಕಥೆ-ಚಿತ್ರಕಥೆ-ನಿರೂಪಣೆಯನ್ನು ನಂಬಿದ ಕನ್ನಡ ಚಿತ್ರ ಯಾವಾಗ ಬರುತ್ತೋ!(ಒನ್ ಇಂಡಿಯಾ ಕನ್ನಡ)

    English summary
    Kannada Movie, Maduve Mane heroine Shraddha Arya looks like a example for Blind Belief in Sandalwood. Because she is the xerox of pooja gandhi. 
 
    Saturday, November 5, 2011, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X