»   » ಕೇವಲ ರು.10ಕ್ಕೆ ಕನ್ನಡ ಸಿನಿಮಾ ನೋಡಿ ಮಜಾ ಮಾಡಿ

ಕೇವಲ ರು.10ಕ್ಕೆ ಕನ್ನಡ ಸಿನಿಮಾ ನೋಡಿ ಮಜಾ ಮಾಡಿ

Posted By:
Subscribe to Filmibeat Kannada

ಈ ವರ್ಷದ ದಸರಾ ಚಲನಚಿತ್ರೋತ್ಸವವನ್ನು ಅಕ್ಟೋಬರ್ 8ರಿಂದ 15ರವರೆಗೆ ಆಯೋಜಿಸಲಾಗುತ್ತಿದೆ. ಸಂಗಂ, ಶಾಂತಲಾ ಹಾಗೂ ಸ್ಕೈಲೈನ್ ಚಿತ್ರಮಂದಿರಗಳಲ್ಲಿ ಪ್ರತಿದಿನ 4 ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಜೆ.ಕೆ. ಗ್ರೌಂಡ್ಸ್‌ನಲ್ಲಿಯೂ ಚಲನಚಿತ್ರ ಏರ್ಪಡಿಸಲಾಗುತ್ತಿದೆ ಎಂದು ದಸರಾ ಚಲನಚಿತ್ರೋತ್ಸವ ಅಧ್ಯಕ್ಷ ಅರುಣ್ ಕುಮಾರ್‌ಗೌಡ ತಿಳಿಸಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳೂ ಸೇರಿದಂತೆ ಒಟ್ಟಾರೆ 63 ಕನ್ನಡ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.ಇದಲ್ಲದೆ ಮೈಸೂರು ಫಿಲಂ ಸೊಸೈಟಿಯು ಚಲನಚಿತ್ರೋತ್ಸವ ಸಮಿತಿ ಸಹಯೋಗದಲ್ಲಿ ನಮನ ಕಲಾಮಂಟಪದಲ್ಲಿ ಪ್ರತಿದಿನ ಇತರೆ ಭಾಷೆಯ ಒಂದು ಕಿರುಚಿತ್ರ ಹಾಗೂ ಒಂದು ಕಥಾಚಿತ್ರ ಪ್ರದರ್ಶನ ವ್ಯವಸ್ಥೆ ಮಾಡುತ್ತಿದೆ.

ಚಲನಚಿತ್ರೋತ್ಸವಕ್ಕೆ ಅ.8ರಂದು ಬೆಳಿಗ್ಗೆ 10 ಗಂಟೆಗೆ ಕಲಾಮಂದಿರದಲ್ಲಿ ಚಾಲನೆ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಹಾಗೂ ಚಿತ್ರನಟ ರಮೇಶ್ ಅರವಿಂದ್ ಚಿತ್ರೋತ್ಸವಕ್ಕೆ ಚಾಲನೆ ನೀಡುವರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್, ಚಿತ್ರನಟ ದಿಗಂತ್, ಕನ್ನಡ ಚಲನಚಿತ್ರ ಕುರಿತ ಪುಸ್ತಕ 'ಸಿನಿಮಾ ಯಾನ'ಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಡಾ.ಕೆ. ಪುಟ್ಟಸ್ವಾಮಿ ಮತ್ತಿತರರು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ಚಲನಚಿತ್ರ ಮಂದಿರಗಳಲ್ಲಿ ಬಾಲ್ಕನಿಗೆ ರು.10 ಹಾಗೂ ನೆಲ ಅಂತಸ್ತಿಗೆ ರು.5 ರಿಯಾಯಿತಿ ದರ ನಿಗಧಿಪಡಿಸಿದೆ. ನಮನ ಕಲಾಮಂಟಪದಲ್ಲಿ ಪ್ರವೇಶ ಉಚಿತ ಇರುತ್ತದೆ ಎಂದು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಗೋವಿಂದರಾಜ ಬಾಬು, ಎಸ್. ನಾಗೇಶ್ ರಾವ್ ಅಪ್ಪು, ಕಾರ್ಯಾಧ್ಯಕ್ಷ ಎ.ಆರ್. ಪ್ರಕಾಶ್, ಸದಸ್ಯ ಕಾರ್ಯದರ್ಶಿ ಆರ್. ರಘುನಂದನ್ ಉಪಸ್ಥಿತರಿದ್ದರು.

ಚಲನಚಿತ್ರ ಪ್ರದರ್ಶನದ ಸಂಪೂರ್ಣವಿವರಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada