»   » ಶೀಘ್ರದಲ್ಲೆ ದಿಗಂತ್ ಪಾನಿಪುರಿಗೆ ಮಸಾಲೆ ಬೀಳಲಿದೆ

ಶೀಘ್ರದಲ್ಲೆ ದಿಗಂತ್ ಪಾನಿಪುರಿಗೆ ಮಸಾಲೆ ಬೀಳಲಿದೆ

Posted By:
Subscribe to Filmibeat Kannada

ಕರಣ್ ರಚನೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ 'ಪಾನಿಪುರಿ ಚಿತ್ರದ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ. ಚಿತ್ರದ ನಾಯಕನಾಗಿ ದಿಗಂತ್ ಅಭಿನಯಿಸುತ್ತಿದ್ದಾರೆ. ದಿಗಂತ್ 'ಪಂಚರಂಗಿ' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದರಿಂದ ನಮ್ಮ ಚಿತ್ರ ಆರಂಭವಾಗುವುದು ಸ್ವಲ್ಪ ತಡವಾಯಿತೆಂದು ನಿರ್ಮಾಪಕ ಗೂಡುರು ವೆಂಕಟೇಶ್ವರಲು ತಿಳಿಸಿದ್ದಾರೆ.

ರವಿಚಂದ್ರನ್ ಅವರು ನಟಿಸಿದ 'ಕನಸುಗಾರ' ಚಿತ್ರವನ್ನು ನಿರ್ದೇಶಿಸಿ ಕರಣ್ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದರು. ಈ ಚಿತ್ರ ಕೂಡ ಸದಭಿರುಚಿ ಚಿತ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ನಿರ್ದೇಶಕರು. ನಾಯಕಿ ಸೇರಿದಂತೆ ಎಲ್ಲಾ ಕಲಾವಿದರ ಮತ್ತು ತಂತ್ರಜ್ಞರ ಆಯ್ಕೆ ಪ್ರಗತಿಯಲ್ಲಿದೆ.

ಬೆಂಗಳೂರು, ದಕ್ಷಿಣ ಕನ್ನಡ, ಹೈದರಾಬಾದ್ ಗಳಲ್ಲಿ ಭಾಸ್ಕರ್ ಛಾಯಾಗ್ರಹಣದಲ್ಲಿ ಪಾನಿಪುರಿ ಚಿತ್ರೀಕರಣ ನಡೆಯಲಿದೆ. ಮೂರು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಾಗುತ್ತದೆ. ಪಾನಿಪುರಿಗೆ ಮಸಾಲೆ ಕೊರೆತೆ ಇರುವ ಕಾರಣ ಸದ್ಯಕ್ಕೆ ನಾಯ್ಕಿ ಸಿಕ್ಕಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada