ಫ್ರೆಂಡ್ಸ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ದಿಗಂತ್

ಪ್ರಸ್ತುತ ಫ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಿಂದ ನೂತನ ಚಿತ್ರವೊಂದು ಆರಂಭವಾಗಿದೆ. ಹೆಸರಿಡಿದ ಈ ಚಿತ್ರದಲ್ಲಿ ಮೋಹಕ ಬೆಡಗಿ ಸುಮನ್‌ರಂಗಾನಾಥ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಫೆಬ್ರವರಿ ಅಂತ್ಯದ ವೇಳೆಗೆ ಒಂದೇ ಹಂತದಲ್ಲಿ ಚಿತ್ರ ಪೂರ್ಣವಾಗಲಿದೆ. ಇತ್ತೀಚೆಗೆ ರೆಸಿಡೆನ್ಸಿ ರಸ್ತೆಯ ಎನ್.ವೈ.ಕೆ ಡಿಸ್ಕೋ ಕ್ಲಬ್‌ನಲ್ಲಿ ವಿ.ಮನೋಹರ್ ರಚಿಸಿರುವ ನಿಂದಲ್ಲ ಕಾಲ ನಂದು ಬಾಬಾ ಬೀಬಿ- ಸ್ಯಾರಿ ಲೈಲಾ ಹಿಂದೆ ಬಾ ಹಾ ಬೀಬಿಎಂಬ ಗೀತೆಯನ್ನು ಸುಮನ್‌ರಂಗಾನಾಥ್ ಹಾಗೂ ಸಹನರ್ತಕರ ಅಭಿನಯದಲ್ಲಿ ಚಿತ್ರೀಕರಿಸಿಕೊಂಡರು.
ನಿರ್ದೇಶಕ ಬಿ.ಶಂಕರ್. ನಿರ್ದೇಶಕರೇ ಚಿತ್ರಕತೆ ಬರೆದು ನಿರ್ಮಾಣದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಸುಂದರನಾಥ್‌ಸುವರ್ಣ ಛಾಯಾಗ್ರಹಣ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್ ನೃತ್ಯ, ರಾಮಣ್ಣನವರ ನಿರ್ಮಾಣನಿರ್ವಹಣೆಯಿದೆ. ದಿಗಂತ್, ರೋಹನ್‌ಗೌಡ, ನಿಖಿತ, ಸುಮನ್‌ರಂಗಾನಾಥ್, ಉಮಾಶ್ರೀ, ಹರೀಶ್ ರೈ, ಮೈಕಲ್‌ಮಧು, ರೇಖಾದಾಸ್ ಮುಂತಾದವರ ತಾರಾಬಳಗ ಈ ನೂತನ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಹಿಂದಿ ಬಾರದ್ದಕ್ಕೆ ಹಿಂದೆ ಬಿದ್ದ ದಿಗಂತ್


Click it and Unblock the Notifications











