»   »  ಪ್ರಕೃತಿ ಮಡಿಲಲ್ಲಿ ಬೀಡುಬಿಟ್ಟ ಕನ್ನಡ ಚಿತ್ರಗಳು!

ಪ್ರಕೃತಿ ಮಡಿಲಲ್ಲಿ ಬೀಡುಬಿಟ್ಟ ಕನ್ನಡ ಚಿತ್ರಗಳು!

Subscribe to Filmibeat Kannada
Andrita Ray
ಕನ್ನಡ ಚಿತ್ರಗಳು ಪ್ರಕೃತಿಯ ಸುಂದರ ತಾಣಗಳತ್ತ ವಾಲಿವೆ. ಕಾಡುಮೇಡು, ಬೆಟ್ಟಗುಡ್ಡ, ಮಳೆಗಾಳಿಗೆ ಕನ್ನಡ ಚಿತ್ರಗಳು ಮೈಯೊಡ್ಡಿವೆ. ರಮಣೀಯ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರೀಕರಣ ಹಂತದಲ್ಲಿರುವ ಬಹುತೇಕ ಚಿತ್ರಗಳು ಸುಂದರ ತಾಣಗಳನ್ನು ಅರಸಿ ಹೊರಟಿವೆ. ಇಲ್ಲಿವೆ ಓದಿ ಕೆಲವೊಂದು ಸುದ್ದಿ ತುಣುಕುಗಳು.

ಈ ಸಂಜೆ
ಸಂಜನಾ ಮತ್ತು ಆರ್ಯ ಮುಖ್ಯಭೂಮಿಕೆಯ ಚಿತ್ರ. ಕನಕಪುರ ರಸ್ತೆ ಬಳಿಯ ಕಾಡಿನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸುಂದರ ಸಂಜೆಯೊಂದರ ಸುತ್ತ ಹೆಣೆದುಕೊಂಡ ಚಿತ್ರ. ಸಂಜನಾ ಅವರಿಗೆ ಕಾಡಿನ ಚಿತ್ರೀಕರಣ ಮರೆಯಲಾಗದ ಅನುಭವಗಳನ್ನು ಕೊಟ್ಟಿದೆಯಂತೆ. ಪ್ರತಿದಿನ ಕಾಡಿನಲ್ಲಿ ಅಡ್ಡಾಡಿ ಕಾಲಿಗೆ ಗಾಯ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಸಂಜನಾ.

ಬಿಸಿಲೆ
ದಿಗಂತ್ ಮತ್ತು ಜೆನ್ನಿಫರ್ ಕೊತ್ವಾಲ್ ನಟಿಸುತ್ತಿರುವ ಚಿತ್ರ.ಚಿತ್ರದ ಬಹುತೇಕ ಭಾಗವನ್ನು ಮೈಸೂರು ಮತ್ತು ಕೊಡಗಿನ ರಮಣೀಯ ಕಾಡುಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹಿನ್ನೆಲೆಯಲ್ಲಿ ಬರುವ ಆನೆಗಳು ಸಖತ್ ಮಜಾ ಕೊಟ್ಟ್ಟಿವೆ. ನನ್ನ ಬಳಿಯ ಹ್ಯಾಂಡಿ ಕ್ಯಾಮ್ ನಲ್ಲಿ ಕಾಡಿನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದೇನೆ ಎಂಬುದು ಜೆನ್ನಿಫರ್ ವಿವರಣೆ.

ಮನಸಾರೆ
ಇನ್ನು ಯೋಗರಾಜ್ ಭಟ್ಟರ ಮನಸಾರೆ ಚಿತ್ರತಂಡ ಸುಂದರ ತಾಣಗಳನ್ನು ಅರಸಿಕೊಂಡು ಇಡೀ ಕರ್ನಾಟಕನ್ನು ಅಲೆದಿದೆ. ಚಿತ್ರದ ಎರಡು ಹಾಡುಗಳನ್ನು ಕೊಡಗಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕೊಡಗಿನ ರಮಣೀಯ ದೃಶ್ಯಗಳನ್ನು ಮನಸಾರೆ ಸವಿದ್ದಿದ್ದೇನೆ. ಚಿತ್ರೀಕರಣ ಇಲ್ಲ ಎಂದರೆ ಅಡ್ಡಾಡಲು ಹೋಗುತ್ತಿದ್ದೆ ಎನ್ನುತ್ತಾರೆ ಚಿಗರೆ ಕಂಗಳ ಅಂದ್ರಿತಾ ರೇ.

ಮನಸಿನ ಮಾತು
ಅಜಯ್ ರಾವ್ ಮತ್ತು ಅಂದ್ರಿತಾ ರೇ ನಟನೆಯ ಚಿತ್ರ ಇತ್ತೀಚೆಗೆ ಕುಲು, ಮನಾಲಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡಿತು. ಅತೀ ಶೀತ ವಾತಾವರಣ ಹಾಗೂ ಬೆಟ್ಟದ ಮೇಲಿನ ಚಿತ್ರೀಕರಣ ನಿಜಕ್ಕೂ ನಮಗೆ ಶತ್ರುವಾಗಿ ಪರಿಣಮಿಸಿತ್ತು. ತುಂಡುಬಟ್ಟೆ ಚಿತ್ರೀಕರಣದಿಂದ ಮೈಯಲ್ಲಾ ಮರಗಟ್ಟಿ ಹೋಗಿತ್ತು. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಓಡುತ್ತಿದೆ ಎನ್ನುತ್ತಾರೆ ಅಂದ್ರಿತಾ.

ಜಸ್ಟ್ ಮಾತ್ ಮಾತಲ್ಲಿ
ಸುದೀಪ್ ರ ಹೊಸ ಚಿತ್ರ. ಪ್ರೇಮ ಕಥಾ ಹಂದರವುಳ್ಳ ಈಚಿತ್ರ ಸಕಲೇಶಪುರದಲ್ಲಿ ಚಿತ್ರೀಕ್ರಣಗೊಳ್ಳುತ್ತಿದೆ. ಮಳೆಗಾಲದಲ್ಲಿ ಸಕಲೇಶಪುರ ರುದ್ರ ರಮಣೀಯವಾಗಿರುತ್ತದೆ. ಹಚ್ಚಹಸುರಿನ ಗಿಡಮರ,ಮಳೆ ಹನಿಗಳ ನಡುವೆ ಚಿತ್ರೀಕರನ ನಡೆಯುತ್ತಿದೆ ಎಂದು ರಮ್ಯಾ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada