»   »  ದರ್ಶನ್ ಗೆ ಜೋಡಿಯಾದ ಮಿಸ್ಸೆಸ್ ಇಂಡಿಯಾ

ದರ್ಶನ್ ಗೆ ಜೋಡಿಯಾದ ಮಿಸ್ಸೆಸ್ ಇಂಡಿಯಾ

Subscribe to Filmibeat Kannada
aarti thakur
ಉಡುಪಿ ಜಿಲ್ಲೆ, ಕು೦ದಾಪುರ ತಾಲೂಕಿನ ಗುಲ್ವಾಡಿ ಮೂಲದ ಆರತಿ ಠಾಕೂರ್, ಮಹೇಶಬಾಬು ನಿರ್ದೇಶನದ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿರುವ "ಅಭಯ್" ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕೊ೦ಕಣಿ ಮಾತಾಡುವ ಗೌಡ ಸಾರಸ್ವತ ಕುಟುಂಬದ ಈಕೆಯ ತ೦ದೆ ರತ್ನಾಕರ ಗುಲ್ವಾಡಿ ತಾಯಿ ರಾಧಿಕಾ. ಇವರಿಬ್ಬರೂ ಶಿವಮೊಗ್ಗದ ಕಾರ್ಪೋರೇಷನ್ ಬ್ಯಾ೦ಕ್ ನಲ್ಲಿ ಹಲವು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಆರತಿ ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಸೇರಿದ್ದರೂ, ಬಿಕಾ೦ ಪದವೀಧರೆ ಆಗಿದ್ದು ಮು೦ಬೈನಲ್ಲಿ.

ಮು೦ಬೈನಲ್ಲಿ ಮಾಡೆಲ್ ಆಗಿರುವ ಈಕೆ, 2006ರ "ಮಿಸ್ಸೆಸ್ ಇ೦ಡಿಯಾ" ವಿಜೇತೆ. 75ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊ೦ಡಿದ್ದು ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊ೦ಡಿದ್ದಾರೆ. ಮು೦ಬೈ ಮೂಲದ ಉದ್ಯಮಿ ದೀಪಕ್ ಠಾಕೂರ್  ಈಕೆಯ ಪತಿ. ಆರತಿ ಎರಡು ಮುದ್ದು ಮಕ್ಕಳ ತಾಯಿ.

ಅಭಯ್ ಚಿತ್ರದ ನಿರ್ದೇಶಕ ಮಹೇಶ್ ಬಾಬು ಪ್ರಕಾರ ಆರತಿ ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲರು, ಅ೦ತೂ ನಮ್ಮ ದರ್ಶನ್ ಎತ್ತರಕ್ಕೆ ಹೋಲಿಕೆಯಾಗುವ ನಟಿ ಸಿಕ್ಕ೦ತಾಗಿದೆ.
(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada