»   » ಗೋವಿಂದಾ ಪುತ್ರಿ ನರ್ಮದಾ ಚಿತ್ರ ಸದ್ಯದಲ್ಲೇ ತೆರೆಗೆ

ಗೋವಿಂದಾ ಪುತ್ರಿ ನರ್ಮದಾ ಚಿತ್ರ ಸದ್ಯದಲ್ಲೇ ತೆರೆಗೆ

Posted By:
Subscribe to Filmibeat Kannada
Govinda daughter Narmada Bollywood debut Pahlaj Nihalani
ಸಿನಿ ಜಗತ್ತಿನಲ್ಲಿ 'ಅಪ್ಪ-ಅಮ್ಮನಂತೆ ಮಕ್ಕಳೂ ಸಿನಿಭೂಮಿಕೆಗೆ' ಎಂಬ ಸಂಪ್ರದಾಯಕ್ಕೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಬಾಲಿವುಡ್ ನ ಅಂದಕಾಲತ್ತಿಲ್ ಖ್ಯಾತ ನಟ ಗೋವಿಂದಾ ಅವರ ಪುತ್ರಿ ನರ್ಮದಾ ಅಹುಜಾ ನಾಯಕಿಯಾಗಿ ಅಭಿನಯಿಸಲು ಸಿದ್ಧತೆ ನಡೆಸಿದ್ದಾರೆ.

ನಾಯಕಿಯಾಗಿ ನರ್ಮದಾ ಅಭಿನಯಿಸುತ್ತಿರುವ ಬಾಲಿವುಡ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲು ಸಿದ್ಧತೆ ನಡೆದಿದೆ. ನಿರ್ಮಾಪಕ ಪಹ್ಲಾಜ್ ನಿಹಲಾನಿ ನರ್ಮದಾ ಅಹುಜಾ ಅವರನ್ನು ಪರಿಚಯಿಸುತ್ತಿದ್ದಾರೆ. ನಿಹಲಾನಿ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ನರ್ಮದಾ ಅಭಿನಯಿಸುತ್ತಿದ್ದಾರೆ.

ಈ ವಿಷಯವನ್ನು ನಿಹಲಾನಿ ಖಚಿತಪಡಿಸಿದ್ದು, ನರ್ಮದಾ ನಮ್ಮ ಕುಟುಂಬದ ಒಬ್ಬ ಸದಸ್ಯಳಂತೆ ಇದ್ದಾಳೆ. ಅವರಿಗಾಗಿ ಪ್ರತ್ಯೇಕ ಸ್ಕ್ರಿಪ್ಟ್ ರೆಡಿ ಮಾಡಲಾಗುತ್ತಿದೆ. ತಮ್ಮ ನೂತನ ಚಿತ್ರದ ಮೂಲಕ ಆಕೆಯನ್ನು ಭರ್ಜರಿಯಾಗಿ ಬಾಲಿವುಡ್ ಸಿನಿಜಗತ್ತಿಗೆ ಪರಿಚಯಿಸುವುದಾಗಿ ಹೇಳಿದ್ದಾರೆ.

ನಿಹಲಾನಿ ಈ ಹಿಂದೆ ಶೋಲಾ ಔರ್ ಶಬನಮ್, ಅಂದಾಜ್, ಆಂಖೇ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆದರೆ ತಮ್ಮ ಹೊಸ ಚಿತ್ರದ ಕಥಾಹಂದರ ಏನು, ನರ್ಮದಾ ಅಹುಜಾ ಪಾತ್ರ ಎಂತಹುದು ಎಂಬ ಗುಟ್ಟನ್ನು ಯಶಸ್ವಿ ನಿರ್ಮಾಪಕ ನಿಹಲಾನಿ ಬಿಟ್ಟುಕೊಟ್ಟಿಲ್ಲ.

English summary
Govinda daughter Narmada Bollywood debut Pahlaj Nihalani. Film producer Pahlaj Nihalani says he is working to give Govinda's daughter Narmada Ahuja a perfect launch in Bollywood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada