Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೈಸೂರು-ಹೈದರಾಬಾದ್‌ನಲ್ಲಿ ‘ಕಾಂಟ್ರಾಕ್ಟ್‘
ಶೈಲಜಾ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್.ರಾಮಚಂದ್ರ ರಾಜು ನಿರ್ಮಿಸುತ್ತಿರುವ 'ಕಾಂಟ್ರಾಕ್ಟ್" ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇದೇ ತಿಂಗಳ ಹದಿನೈದರಿಂದ ಆರಂಭವಾಗಲಿದೆ. ಮೈಸೂರು, ಹೈದರಾಬಾದ್ ,ಮಲೇಷಿಯಾ, ಬ್ಯಾಂಕಾಕ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಪ್ರೀತಿ ಪ್ರೇಮ, ನೋವು ನಲಿವು ಹಾಗೂ ಸಾಹಸಭರಿತ ದೃಶ್ಯಗಳನ್ನು ಚಿತ್ರ ಹೊಂದಿರುತ್ತದೆ ಎಂದು ನಿರ್ದೇಶಕ ಸಮೀರ್ ಹೇಳುತ್ತಾರೆ. ತೆಲುಗು ನಟ ನಿರ್ದೇಶಕ ಜೆಡಿ ಚಕ್ರವರ್ತಿ ಅವರ ಹಲವು ಸಿನಿಮಾಗಳಿಗೆ ಸಹಾಯಕರಾಗಿ ದುಡಿದ ಅನುಭವವಿರುವ ಸಮೀರ್ ಗೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ.
ಎಸ್.ಎಸ್.ಸಮೀರ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಅರ್ಜುನ್‌ಸರ್ಜಾ ಹಾಗೂ ತೆಲುಗಿನ ಜೆ.ಡಿ.ಚಕ್ರವರ್ತಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್ ಬೆಡಗಿ ಮಿನೀಷ ಲಂಬಾಬ ಈ ಚಿತ್ರದ ನಾಯಕಿ. ಮಲ್ಲಿಕಾ ಶರಾವತ್ 'ಕಾಂಟ್ರಾಕ್ಟ್"ನ ಒಂದು ಗೀತೆಗೆ ಹೆಜ್ಜೆ ಹಾಕಲಿದ್ದಾರೆ. ಉದ್ಯಮಿ ಪಾತ್ರದಲ್ಲಿ ಅರ್ಜುನ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಕಾಟ ಕೊಡುವ ವಿಲನ್ ಆಗಿ ಜೆಡಿ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದಾರೆ.
ಅನ್ವೇಶ್, ರಂಗಾಯಣರಘು, ಸಾಧುಕೋಕಿಲಾ, ಕೋಟ ಶ್ರೀನಿವಾಸ್‌ರಾವ್, ಶರಣ್, ರಮೇಶ್‌ಭಟ್, ಕಾಶಿ, ರಾಜು ತಾಳಿಕೋಟೆ ಮುಂತಾದವ ಹಿರಿಯ ಕಿರಿಯ ತಾರಾಬಳಗದೊಂದಿಗೆ ಈ ಚಿತ್ರ ಸುಂದರ ಕೌಟುಂಬಿಕ ಚಿತ್ರವಾಗಲಿದೆ ಎಂಬ ನಂಬಿಕೆಯನ್ನು ಸಮೀರ್ ಇಟ್ಟುಕೊಂಡಿದ್ದಾರೆ. ಸುಭಾಷ್-ವಿಶ್ವಾಸ್ ಸಂಗೀತ, ಅತ್ತಿಗಿರಿ ವೆಂಕಿ ಗೀತರಚನೆಗೆ ಅರ್ಜುನ್ ಮಿನಿಷಾ ಹೆಜ್ಜೆ ಹಾಕಲಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ಶ್ರೀಮಂಜುನಾಥ ನಂತರ ಮತ್ತೆ ದ್ವಿಭಾಷಾ ಚಿತ್ರ ಸೂತ್ರ ಹಿಡಿದುಕೊಂಡು ಬಂದಿರುವ ಅರ್ಜುನ್ ಸರ್ಜಾ ಮತ್ತೊಮ್ಮೆ ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸೋದರಳಿಯ ಚಿರು ಬೆಳವಣಿಗೆಗೂ ಪ್ರೋತ್ಸಾಹಿಸುತ್ತಿದ್ದಾರೆ.