For Quick Alerts
  ALLOW NOTIFICATIONS  
  For Daily Alerts

  ಯಕ್ಷ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಅಭಿನಯ

  |

  ಹೆಸರಾಂತ ಕನ್ನಡ ನಾಟಕಕಾರ ಮತ್ತ್ತು ನಟ ಮಾಸ್ಟರ್ ಹಿರಣ್ಣಯ್ಯ ಮೂರು ಪುಸ್ತಕಗಳ ಬರವಣೆಯಲ್ಲಿ ಮಗ್ನರಾಗಿದ್ದಾರೆ. ತಮ್ಮ ಪರಿಣಾಮಕಾರಿ ಭಾಷಣ ಶೈಲಿಗಳಿಂದ ಜನಮನ ಗೆದ್ದು ರಾಜಕೀಯ, ಭ್ರಷ್ಟಾಚಾರಗಳನ್ನು ಟೀಕಿಸಲು 'ಲಂಚಾವತಾರ'ಎತ್ತಿದ ನಟ. 76ರ ಹರಯದಲ್ಲಿರುವ ಹಿರಣ್ಣಯ್ಯನವರು ಹೊಸ ಉತ್ಸಾಹ ತುಂಬಿಕೊಂಡು ಲೇಖನಿಯನ್ನು ಕೈಗೆತ್ತಿಕೊಂಡಿದ್ದಾರೆ.

  ಮೂರು ಪುಸ್ತಕಗಳಲ್ಲಿ ಮೊದಲು ಪ್ರಯತ್ನವಾಗಿ ಅವರ ಆತ್ಮಕತೆ ಹೊರಬರಲಿದೆ. ನಂತರ ಹಿರಣ್ಣಯ್ಯ ಮಿತ್ರಮಂಡಳಿಯ ಪ್ರಯೋಗಗಳು, ಕಷ್ಟಕಾರ್ಪಣ್ಯಗಳ ಕುರಿತ ಎರಡನೇ ಪುಸ್ತಕ ಪ್ರಕಟವಾಗಲಿದೆ. ಮೂರನೇ ಪುಸ್ತಕವಾಗಿ 'ಮಹನೀಯರೊಂದಿಗೆ ಮಾಸ್ಟರ್' ಅನಾವರಣಗೊಳ್ಳಲಿದೆ.

  ಮಾಸ್ಟರ್ ಹಿರಣ್ಣಯ್ಯ ಅವರು ಹೆಚ್ಚುಹೆಚ್ಚು ಚಿತ್ರಗಳಲ್ಲಿ ಅಭಿನಯಿಸಲು ಅವರ ವಯಸ್ಸು ಅಡ್ಡಿಪಡಿಸುತ್ತಿದೆ. ಹಾಗಾಗಿ ಬೆಳ್ಳಿಪರದೆ ಮೇಲೆ ಅಪರೂಪಕ್ಕೆ ಅವರ ದರ್ಶನವಾಗುತ್ತದೆ. ಈ ನಡುವೆ ಅವರು ಎರಡು ಟಿವಿ ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದಾರೆ. ಇದೀಗ ಯಕ್ಷ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

  ನಾನಾ ಪಾಟೇಕರ್ ಅವರೊಂದಿಗೆ 'ಯಕ್ಷ' ಚಿತ್ರದಲ್ಲಿ ನಟಿಸಲು ಹಿರಣ್ಣಯ್ಯ ಖುಷಿಯಾಗಿದೆಯಂತೆ. ''ನಾನಾ ಪಾಟೇಕರ್ ಅವರೊಂದಿಗೆ ಅಭಿನಯಿಸಲು ಉತ್ಸುಕನಾಗಿದ್ದೇನೆ. ರಂಗಭೂಮಿ ಕಲಾವಿದನಾದ ಪಾಟೇಕರ್ ಸಿನಿಮಾ ರಂಗದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದರು. ಪ್ರತಿಭಾವಂತ ನಟ ಎನ್ನಿಸಿಕೊಂಡಿರುವ ಅವರ ಬಗ್ಗೆ ನನಗೆ ಅಪಾರ ಅಭಿಮಾನವಿದೆ'' ಎಂದು ಮಾಸ್ಟರ್ ಹಿರಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Monday, October 5, 2009, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X