»   » ಬಾಲಕನೊಬ್ಬನ ಅಪರೂಪದ ಚಿತ್ರ 'ಏಕಮೇವ'

ಬಾಲಕನೊಬ್ಬನ ಅಪರೂಪದ ಚಿತ್ರ 'ಏಕಮೇವ'

Posted By:
Subscribe to Filmibeat Kannada

ಇಡೀ ಸಿನಿಮಾದಲ್ಲಿ ಏಕವ್ಯಕ್ತಿ ಅಭಿನಯಿಸಿರುವುದು ಹೊಸದೇನಲ್ಲ. ಆದರೆ, ಬಾಲಕನೊಬ್ಬನ ಕೈಯಲ್ಲಿ ಅಂತಹ ಅಪರೂಪದ ಪಾತ್ರ ಮಾಡಿಸಿರುವುದು ಇದೇ ಮೊದಲ ಸಲ. 9 ವರ್ಷದ ಬಾಲಕ ಚಿರಂಜೀವಿ ಅಭಿನಯಿಸುತ್ತಿರುವ 'ಏಕಮೇವ' ಎಂಬ ಈ ಚಿತ್ರದ ಚಿತ್ರೀಕರಣ ಕಳೆದ 12 ರಿಂದ ಬೆಂಗಳೂರು, ಮೈಸೂರು ಸುತ್ತಮುತ್ತ ನಿರಂತರವಾಗಿ ನಡೆದು ಮುಕ್ತಾಯ ಹಂತ ತಲುಪಿದೆ.

ಬಾಲಕ ಚಿರಂಜೀವಿ, ಇತ್ತೀಚೆಗೆ ಬಿಡುಗಡೆಯಾದ 'ಸುಗ್ರೀವ' ಸೇರಿದಂತೆ, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿ 9, 35, 45 ಹಾಗೂ 60 ವರ್ಷದ ವ್ಯಕ್ತಿಯಾಗಿ 4 ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಹೇಮಾಮಾಲಿನಿಯ ಪರ್ಸನಲ್ ಮೇಕಪ್‌ಮ್ಯಾನ್ ಶಮೀರ್ ಜೂಕರ್ ಬಾಂಬೆಯಿಂದ ಬಂದು ಚಿರಂಜೀವಿಗೆ ವಯಸ್ಕ ವ್ಯಕ್ತಿಯ ವೇಶಗಳನ್ನು ಹಾಕುತ್ತಿದ್ದಾರೆ. ಯಾರ ಬೆಂಬಲವೂ ಇಲ್ಲದೇ ಅಪರೂಪದ ಸಾಧನೆ ಮಾಡುವ ಬಾಲಕನ ಕಥೆಯೇ ಈ ಚಿತ್ರದ ಹೈಲೈಟ್.

ಐದು ಹಾಡುಗಳಿದ್ದು, ಸಲೀಂ ಪುತ್ತೂರ್ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀ ಮುತ್ತು ಫಿಲಂಸ್ ಲಾಂಛನದಲ್ಲಿ ಪ್ರವೀಣ್‌ಕುಮಾರ್ ಕೊಂಚಾಡಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಡಿ. ನಾಗರಾಜು ಛಾಯಾಗ್ರಾಹಕರಾಗಿದ್ದಾರೆ. ರಾಜು ಅವರ ಕಥೆ-ಚಿತ್ರಕಥೆ ಇದೆ. ನೈಜವಾಗಿ ಮೂಡಿಬಂದಿರುವ 60 ವರ್ಷದ ವ್ಯಕ್ತಿಯ ವಿಶೇಷ ಗೆಟಪ್ಪನ್ನು ಎಲ್ಲರೂ ಬಹಳವಾಗಿ ಮೆಚ್ಚಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada