»   » ಮೈಸೂರು ಮ್ಯಾರಥಾನ್‌ಗೆ ನಿಧಿ ಸುಬ್ಬಯ್ಯ ರಾಯಭಾರಿ

ಮೈಸೂರು ಮ್ಯಾರಥಾನ್‌ಗೆ ನಿಧಿ ಸುಬ್ಬಯ್ಯ ರಾಯಭಾರಿ

Posted By:
Subscribe to Filmibeat Kannada

ಮೈಸೂರು ದಸರಾ ಉತ್ಸವದ ಭಾಗವಾಗಿ ನಡೆಯುವ ಮೈಸೂರು ಮ್ಯಾರಥಾನ್ ರೇಸ್‌ಗೆ ರಾಯಭಾರಿಯಾಗಿ ಕನ್ನಡ ಸಿನಿಮಾ ತಾರೆ ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 2ರ ಭಾನುವಾರ ಮ್ಯಾರಥಾನ್ ಸ್ಪರ್ಧೆ ಆರಂಭವಾಗಲಿದೆ.

ಜಗದ್ವಿಖ್ಯಾತ ಮೈಸೂರು ದಸರಾ ನೋಡಲು ಬರುವ ಪ್ರವಾಸಿಗರು ಈ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಲೈಫ್ಸ್ ಕಾಲಿಂಗ್ ಸ್ಫೋರ್ಟ್ ಸಂಸ್ಥೆಯ ನಿರ್ದೇಶಕಿ ಶೀಲಾ ಕೃಷ್ಣನ್ ತಿಳಿಸಿದ್ದಾರೆ. ಇದೊಂದು ಸ್ಫೋರ್ಟ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯಾಗಿದ್ದು, ಕ್ರೀಡಾ ಹಿನ್ನೆಲೆಯುಳ್ಳ ಪ್ರತಿಭಾನ್ವಿತರು ನಡೆಸುತ್ತಿರುವ ಸಂಸ್ಥೆಯಾಗಿದೆ.

ಸೈಕ್ಲಿಂಗ್ ಹಾಗೂ ಮ್ಯಾರಥಾನ್ ಸ್ಪರ್ಧೆಗಳನ್ನು ಭಾರತ ಹಾಗೂ ಯುಎಸ್‌‍ನಲ್ಲಿ ನಡೆಸಲಾಗುತ್ತಿದೆ. ಮೈಸೂರು ಮ್ಯಾರಥಾನ್‌ಗೆ ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದು ರಸ್ತೆ ಓಟ ಸ್ಪರ್ಧಿಗಳಿಗೆ ಮೈಸೂರು ಪಾಕ್ ಸಿಕ್ಕಷ್ಟೇ ಸಂತೋಷವಾಗಿದೆ. (ಏಜೆನ್ಸೀಸ್)

English summary
Actress of Kannada movies Nidhi Subbaiah is the ambassador to Mysore Marathon race starts from 2nd October as part of Dasara festivities.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada