For Quick Alerts
  ALLOW NOTIFICATIONS  
  For Daily Alerts

  ಬೆಳಗಾವಿ ಬಾಲೆ ಲಕ್ಷ್ಮಿ ರೈ ಚಾನ್ಸ್ ಲಪಟಾಯಿಸಿದ ನಿಖಿತಾ

  By Rajendra
  |

  ಇವರಿಬ್ಬರೂ ತಾರೆಗಳೂ ನೋಡಲು ಆಕರ್ಷಕವಾಗಿದ್ದು ನೋಟದಲ್ಲಿ ನಾನಾ ನೀನಾ ಎಂಬಂತಿದ್ದಾರೆ. ಆದರೆ ಬೆಳಗಾವಿ ಬಾಲೆ ಲಕ್ಷ್ಮಿ ರೈಗೆ ಸಿಕ್ಕಿದ್ದ ಚಾನ್ಸ್ ಕಡೆ ಘಳಿಗೆಯಲ್ಲಿ ನಿಖಿತಾ ತುಕ್ರಲ್ ಪಾಲಾಗಿದೆ. ವಿಶೇಷ ಎಂದರೆ ಈ ಚಾನ್ಸ್ ಮಿಸ್ ಆಗಿರುವುದು ಗಾಂಧಿನಗದಲ್ಲಿ ಅಲ್ಲವೇ ಅಲ್ಲ. ಪಕ್ಕದ ತಮಿಳುನಾಡಿನಲ್ಲಿ.

  ತಮಿಳು ನಟ ಸೂರ್ಯ ಸಹೋದರ ಕಾರ್ತಿ ತಮ್ಮ ಮುಂದಿನ ಚಿತ್ರಕ್ಕೆ ಲಕ್ಷ್ಮಿ ರೈರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಕಡೆ ಘಳಿಗೆಯಲ್ಲಿ ನಿಖಿತಾ ತುಕ್ರಲ್‌ಗೆ ಚಾನ್ಸ್ ನೀಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಿಖಿತಾಳೇ ನಾಯಕಿ ಎಂಬುದು ಕನ್ಪರ್ಮ್ ಆಗಿದೆ.

  ಸದ್ಯಕ್ಕೆ ಲಕ್ಷ್ಮಿ ರೈ ತುಂಬಾ ಬಿಜಿಯಾಗಿದ್ದಾರಂತೆ. ಆಕೆಯ ಡೇಟ್ಸ್ ಹೊಂದಾಣಿಕೆಯಾಗದೇ ಇರುವ ಕಾರಣ ನಿಖಿತಾಗೆ ಚಾನ್ಸ್ ನೀಡಲಾಗಿದೆ ಎಂದು ಚಿತ್ರದ ನಿರ್ದೇಶಕ ಸೂರಜ್ ತಿಳಿಸಿದ್ದಾರೆ. ಈ ಚಿತ್ರದಲ್ಲಿ ನಿಖಿತಾ ಜೊತೆಗೆ ಮತ್ತೊಬ್ಬ ಬೆಡಗಿ ಅನುಷ್ಕಾ ಶೆಟ್ಟಿ, ಸನುಶಾ ಹಾಗೂ ಮೇಘನಾ ಅಭಿನಯಿಸುತ್ತಿದ್ದಾರೆ.

  ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಭಾರಿ ಬಜೆಟ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ತೊಡಗಿಕೊಂಡಿರುವ ನಿಖಿತಾ, ಜನವರಿ 22ರಿಂದ ಕಾರ್ತಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)

  English summary
  The confusion over one of the female leads in Karthi's forthcoming movie had come to an end. It has now been confirmed that Nikita of Saroja fame has replaced Lakshmi Rai to bag an important character in the untitled Tamil film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X