For Quick Alerts
  ALLOW NOTIFICATIONS  
  For Daily Alerts

  ನವ ಯೌವನ ಸ್ಫುರಿಸಿದ ಸಿಲ್ಕ್ ಮೇಲೆ ಮತ್ತೊಂದು ಚಿತ್ರ

  By Rajendra
  |

  ಈಗಾಗಲೆ ವಿದ್ಯಾ ಬಾಲನ್ 'ದಿ ಡರ್ಟಿ ಪಿಕ್ಚರ್' ಮೂಲಕ ಸಿಲ್ಕ್ ಸ್ಮಿತಾರ ಜೀವನದ ಒಂದು ಮಗ್ಗುಲನ್ನು ತೋರಿಸಿದ್ದರು. ಈ ಚಿತ್ರ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಸೆಳದಿತ್ತು. ಈಗ ಸಿಲ್ಕ್ ಸ್ಮಿತಾ ಅವರ ಮೇಲೆ ಮತ್ತೊಂದು ಚಿತ್ರವನ್ನು ತೆರೆಗೆ ತರಲು ವಿನು ಚಕ್ರವರ್ತಿ ಎಂಬುವವರು ಮುಂದಾಗಿದ್ದಾರೆ.

  ಐಟಂ ಪಾತ್ರಗಳಿಂದ ಹೆಸರಾಗಿದ್ದ ಸಿಲ್ಕ್ ಸ್ಮಿತಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದೇ ವಿನು ಚಕ್ರವರ್ತಿ. ಸಿಲ್ಕ್‌ರನ್ನು ತುಂಬ ಹತ್ತಿರದಿಂದ ಕಂಡಿದ್ದು ಆಕೆಯ ಜೀವನ ಚರಿತ್ರೆಯನ್ನು ತೆರೆಗೆ ತರುವುದಾಗಿ ತಿಳಿಸಿದ್ದಾರೆ. ಆದರೆ ಈ ಚಿತ್ರ ಹಿಂದಿ ಭಾಷೆಗೆ ಬದಲಾಗಿ ತಮಿಳು ಭಾಷೆಯಲ್ಲಿ ಮೂಡಿಬರಲಿದೆ.

  "ವಿಜಯವಾಡದ ಏಲೂರಿನ ಹಿಟ್ಟಿನ ಗಿರಿಣಿಯೊಂದರ ಬಳಿ ತಮ್ಮ ಕಣ್ಣಿಗೆ ಬಿದ್ದು ಸಿಲ್ಕ್ ಸ್ಮಿತಾರನ್ನು ಇಂಡಸ್ಟ್ರಿಗೆ ಪರಿಚಯಿಸಿದ್ದೇ ನಾನು. ಆಕೆಗೆ ನಟನೆಯಲ್ಲಿ ಅತೀವ ಆಸಕ್ತಿ ಇದೆ ಎಂದು ಕೆಲವರು ಹೇಳಿದ್ದರು. ಸಿಲ್ಕ್ ಎಂದು ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದೆ. ನನಗೆ ಗೊತ್ತಿರುವ ಸಿಲ್ಕ್ ಕತೆಯನ್ನು ಬೆಳ್ಳಿತೆರೆಗೆ ತರುತ್ತಿದ್ದೇನೆ" ಎಂದಿದ್ದಾರೆ ವಿನು. (ಏಜೆನ್ಸೀಸ್)

  English summary
  One more biopic on actress Silk Smitha to be launched soon. Vinu Chakaravarthy, the man who introduced Silk Smitha to films, has announced that he will make a biopic on Silk Smitha in Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X