»   » ಸಾರ್ವಜನಿಕ ಬದುಕಿನಿಂದ ರಂಜಿತಾ ನಿವೃತ್ತಿ

ಸಾರ್ವಜನಿಕ ಬದುಕಿನಿಂದ ರಂಜಿತಾ ನಿವೃತ್ತಿ

Posted By:
Subscribe to Filmibeat Kannada

ಚಿತ್ರನಟಿ ರಂಜಿತಾ ಈಗೇನು ಮಾಡುತ್ತಿದ್ದಾರೆ? ಇಷ್ಟಕ್ಕೂ ಆಕೆ ಎಲ್ಲಿದ್ದಾರೆ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಸದ್ಯಕ್ಕೆನಟಿ ರಂಜಿತಾ ಸಾರ್ವಜನಿಕ ಬದುಕಿಗೆ ಗುಡ್ ಬೈ ಹೇಳಿದ್ದು ಕೇರಳದ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಹಾಗಂತ ಆಕೆಯ ಪರ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾಮಿ ನಿತ್ಯಾನಂದ ಕಾಮಕೇಳಿ ಜಗಜ್ಜಾಹೀರಾದ ಮೇಲೆ ನಟಿ ರಂಜಿತಾ ತೀವ್ರವಾಗಿ ಮನನೊಂದಿದ್ದು, ಖಿನ್ನ ಮನಸ್ಕಳಾಗಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಸ್ವಾಮಿ ನಿತ್ಯಾನಂದ ಕಾಮಕೇಳಿಗೆ ಸಂಬಂಧಿಸಿದಂತೆ ನಟಿ ರಂಜಿತಾರನ್ನು ಕರ್ನಾಟಕ ಪೊಲೀಸರು ವಿಚಾರಣೆ ನಡೆಸಿಲ್ಲ ಎಂದೂ ಪ್ರಕಟಣೆ ತಿಳಿಸಿದೆ.

ಸನ್ ಟಿವಿಯಲ್ಲಿ ಮೊದಲು ಬೆಳಕು ಕಂಡ ಸ್ವಾಮಿ ನಿತ್ಯಾನಂದ ಕಾಮಕೇಳಿಯಲ್ಲಿ ನಟಿಯ ಮುಖ ಮಸುಕು ಮಾಡಿ ತೋರಿಸಲಾಗಿತ್ತು. ನಿತ್ಯಾನಂದನ ಜೊತೆಗೆ ಸಿಡಿಯಲ್ಲಿರುವ ನಟಿ ಮತ್ತ್ಯಾರು ಅಲ್ಲ ಆಕೆ ನಟಿ ರಂಜಿತಾ ಎಂದು ಅನುಮಾನ ವ್ಯಕ್ತವಾಗಿತ್ತು. ರಂಜಿತಾ ಹಾಗೂ ನಿತ್ಯಾನಂದ ಕಡೆಗೂ ಮಾಧ್ಯಮಗಳ ಮುಂದೆ ಬರಲೇ ಇಲ್ಲ. ಬಳಿಕ ನಿತ್ಯಾನಂದ ಪರಿಸ್ಥಿತಿ ಏನಾಯಿತು ಎಂಬುದು ಗೊತ್ತೇ ಇವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada