»   »  ಗಾಂಧಿನಗರದಲ್ಲಿ ರೀಮೇಕ್ ಪ್ರಕಾಶಿಸುತ್ತಿದೆ

ಗಾಂಧಿನಗರದಲ್ಲಿ ರೀಮೇಕ್ ಪ್ರಕಾಶಿಸುತ್ತಿದೆ

Posted By:
Subscribe to Filmibeat Kannada
Darshan
ಗಾಂಧಿನಗರದಲ್ಲಿ ಚಿತ್ರೀಕರಣ ಚಟುವಟಿಕೆಗಳು ಜೋರಾಗಿವೆ. ಬಹಳಷ್ಟು ಚಿತ್ರಗಳು ರೀಮೇಕ್ ಎಂದರೆ ಗಾಬರಿಯಾಗದೇ ಇರಲಿಕ್ಕಿಲ್ಲ. ಸದ್ಯಕ್ಕೆ ಏನಿಲ್ಲವೆಂದರೂ ಕನಿಷ್ಠ 10 ಚಿತ್ರಗಳು ಪ್ರಮುಖವಾಗಿ ತಮಿಳಿನಿಂದ ಕನ್ನಡಕ್ಕೆ ರೀಮೇಕ್ ಆಗುತ್ತಿವೆ. ಬೇಸರದ ಸಂಗತಿ ಎಂದರೆ ಶಿವರಾಜ್ ಕುಮಾರ್ ಒಬ್ಬರು ಬಿಟ್ಟರೆ ಮಿಕ್ಕೆಲ್ಲರೂ ರೀಮೇಕ್ ಚಿತ್ರದಲ್ಲಿ ಮುಳುಗೇಳುತ್ತಿದ್ದಾರೆ. ತಮಿಳಿನ 'ದೇವತೈ ಕಂಡೇನ್' ಕನ್ನಡದಲ್ಲಿ 'ಜಾಜಿ ಮಲ್ಲಿಗೆ'ಯಾಗಿದೆ. ರೋಜಾ ಕೂಟ್ಟಂ, 7/ಜಿ ರೈನ್ ಬೋ ಕಾಲೋನಿ ಚಿತ್ರಗಳು ಸಹ ರೀಮೇಕ್ ಆಗುತ್ತಿದೆ.

ಅಜಯ್ ನಂತರದ ಸ್ಥಾನದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಸ್ಥಾನ ಪಡೆದಿದ್ದಾರೆ. ಕಾದಲ್ ಕೊಂಡೇನ್, ಪೊಲ್ಲಾದವನ್ ಚಿತ್ರಗಳು ಕನ್ನಡದಲ್ಲಿ ಕ್ರಮವಾಗಿ ರಾವಣ ಮತ್ತು ಪುಂಡ ಎಂದಾಗಿವೆ. ಧನುಷ್ ಅವರ ತಮಿಳಿನ ಎಲ್ಲ ಚಿತ್ರಗಳು ಕನ್ನ್ನಡಕ್ಕೆ ರೀಮೇಕ್ ಮಾಡಲು ನಿರ್ಮಾಪಕರು ಓಡಾಡುತ್ತಿದ್ದಾರೆ. ಈ ಎಲ್ಲ ಚಿತ್ರಗಳಲ್ಲೂ ಯೋಗೀಶ್ ನಾಯಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ 'ಬೋಸ್' ಮತ್ತು 'ಪೋಕಿರಿ'ತೆಲುಗು ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆ.ಮಂಜು ನಿರ್ಮಾಣದ, ಚಿ.ಗುರುದತ್ ನಿರ್ದೇಶನದ 'ಚಿತ್ತರಂ ಪೇಸಡಿ' ರೀಮೇಕ್ ಚಿತ್ರದಲ್ಲೂ ದರ್ಶನ್ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಇದೆ.

ಇನ್ನು ಪವರ್ ಸ್ಟಾರ್ ಪುನೀತ್ ಸಹ ರೀಮೇಕ್ ಚಿತ್ರಗಳಿಂದ ಹೊರತಾಗಿಲ್ಲ. ತೆಲುಗಿನ 'ರೆಡಿ' ಚಿತ್ರಕ್ಕೆ ಅವರು ಈಗಾಗಲೇ ರೆಡಿ ಎಂದಿದ್ದಾರೆ. ಆ ಚಿತ್ರ ಬಳಿಕ ತೆಲುಗಿನ ಮತ್ತೊಂದು ಚಿತ್ರ 'ಅಥಡು' ರೀಮೇಕ್ ಆಗಲಿದೆ. ರೀಮೇಕ್ ಮಾಡಲ್ಲ ಎನ್ನುತ್ತಿದ್ದ ಪ್ರೇಮ್ ಸಹ ಗೌತಮ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಜ್ಞೆ ಎಳ್ಳುನೀರು ಬಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ರೀಮೇಕ್ ಚಿತ್ರದಲ್ಲಿ ಉಲ್ಲಾಸ ಉತ್ಸಾಹದಿಂದಿದ್ದಾರೆ. ಸುದೀಪ್ 'ವಿಕ್ರಮಾರ್ಕುಡು' ಚಿತ್ರವನ್ನು ರೀಮೇಕ್ ಮಾಡಿ ತಾನೊಬ್ಬ ರೀಮೇಕ್ ನಿರ್ದೇಶಕ ಎಂಬುದನ್ನು ಮೂರನೆ ಬಾರಿ ಪ್ರೂವ್ ಮಾಡಿದ್ದಾರೆ.

ಇದ್ದುದರಲ್ಲಿ ಪ್ರಜ್ವಲ್, ದಿಗಂತ್ ರಂಥ ಹೊಸ ಚಿಲ್ಟು ಪಲ್ಟುಗಳೇ ವಾಸಿ. ತೀರಾ ರೀಮೇಕ್ ಸಹವಾಸ ಬಿಟ್ಟು ಒಂದಿಷ್ಟು ಸ್ವಂತಿಕೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಇವರೆಲ್ಲಾ ಯಾವಾಗ ರೀಮೇಕ್ ಗೆ ಜೈ ಎನ್ನುತ್ತಾರೋ ಗೊತ್ತಿಲ್ಲ. ಅಲ್ಲಿಯವರೆಗೂ ಕನ್ನಡ ಚಿತ್ರರಂಗ ಸಲ್ಪ ಸೇಫು ಅನ್ನಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada