For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಸ್ಮಾರಕಕ್ಕೆ ರು.10 ಕೋಟಿ ಪ್ರಕಟ

  By Rajendra
  |

  ಸತತ ಐದನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈ ಸಲ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಆಧಾರದ ಮೇಲೆ ಯಡಿಯೂರಪ್ಪ ಇಂದು ವಿಧಾನ ಸಭೆಯಲ್ಲಿ 2010-2011ನೇ ಸಾಲಿನ ಆಯ ವ್ಯಯ ಮಂಡಿಸಿದರು.

  ಕನ್ನಡ ಚಿತ್ರೋದ್ಯಮ ಸುದೀರ್ಘ ಸಮಯದಿಂದ ನಿರೀಕ್ಷಿಸುತ್ತಿದ್ದ ಅಮೃತ ಮಹೋತ್ಸವ ಭವನಕ್ಕೆ ಈ ಬಾರಿ ಬಜೆಟ್ ನಲ್ಲಿ ಯಡಿಯೂರಪ್ಪ ರು.5 ಕೋಟಿಗಳನ್ನು ಪ್ರಕಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ನಿಧನ ಬಳಿಕ ಸರಕಾರ ವಿಷ್ಣು ಸ್ಮಾರಕ ನಿರ್ಮಾಣ ಮಾಡುವ ಭರವಸೆಯನ್ನು ನೀಡಿತ್ತು. ಅದೂ ಈ ಬಾರಿಯ ಬಜೆಟ್ ನಲ್ಲಿ ನೆರವೇರಿದೆ. ವಿಷ್ಣು ಸ್ಮಾರಕ್ಕಾಗಿ ರು.10 ಕೋಟಿಯನ್ನು ಪ್ರಕಟಿಸಲಾಗಿದೆ.

  ವರನಟ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಈ ಬಾರಿಯ ಬಜೆಟ್ ನಲ್ಲಿ ರು.4 ಕೋಟಿ ಪ್ರಕಟಿಸಲಾಗಿದೆ.ಚಲನಚಿತ್ರ ಕಾರ್ಮಿಕರು ಮತ್ತು ಕಲಾವಿದರ ನೆರವಿಗೂ ಸರಕಾರ ಧಾವಿಸಿದ್ದು ಇದಕ್ಕಾಗಿ ರು.50 ಲಕ್ಷ ಅನುದಾನವನ್ನು ಪ್ರಕಟಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರು ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಯಡಿಯೂಪ್ಪ ಈ ಬಾರಿಯ ಬಜೆಟ್ ನಲ್ಲಿ ನೀಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X