»   »  ಹಾಡಿನ ಸಂಭ್ರಮದಲ್ಲಿ 'ದಿಲ್ದಾರ'

ಹಾಡಿನ ಸಂಭ್ರಮದಲ್ಲಿ 'ದಿಲ್ದಾರ'

Subscribe to Filmibeat Kannada

ಕನಸು ಕ್ರಿಯೇಟರ್ಸ್ ಲಾಂಛನದಲ್ಲಿ ಅಮನ್ ಅವರು ನಿರ್ಮಿಸುತ್ತಿರುವ "ದಿಲ್ದಾರ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಕೆ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಸಾರಥ್ಯದಲ್ಲಿ ನಡೆಯುತ್ತಿದೆ.

'ದಿಲ್ದಾರ' ನಿರ್ದೇಶಕ ಅಮರ್ ಅವರ ಕನಸಿನ ಕೂಸು. ಖ್ಯಾತ ನಾಮರ ಬಳಿ ಸಹಾಯಕಕರಾಗಿ ದುಡಿದಿರುವ ಅಮರ್ ಅವರಿಗೆ ಇದು ಚೊಚ್ಚಲ ಯತ್ನ. 'ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಹಾಗೂ ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರ ನೋಡುಗರಿಗೆ ಮೆಚ್ಚುಗೆಯಾಗುವುದು ಖಂಡಿತಾ ಎನ್ನುವ ಅಭಿಪ್ರಾಯ ನಿರ್ದೇಶಕರದು.

ನಿರ್ಮಾಪಕರಾಗಿರುವ ಅಮನ್ ಚಿತ್ರದ ನಾಯಕ ಕೂಡ. ಬೆಡಗಿ ನಿಷ್ಮಾ ಚೆಂಗಪ್ಪ 'ದಿಲ್ದಾರ"ನ ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ರಂಗಾಯಣ ರಘು, ಕಿಶೋರ್, ಎಂ.ಎನ್.ಲಕ್ಷ್ಮೀದೇವಿ, ಬಿರಾದಾರ್, ಮೈಕೋ ನಾಗರಾಜ್, ಪ್ರಣವಮೂರ್ತಿ, ವಿಶ್ವ, ಕೆಂಪೇಗೌಡ ಮುಂತಾದವರಿದ್ದಾರೆ.

ರವಿಕಿರಣ್ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ಶಿವರಾಜ್ ಮೇಹು ಅವರ ಸಂಕಲನವಿದೆ. ಜಗದೀಶ್ ಎಸ್.ವಿ ಕಥೆ, ಹರ್ಷ-ರಘು ನೃತ್ಯ, ಡಿಫ಼ರೆಂಟ್ ಡ್ಯಾನಿ ಸಾಹಸ, ನಾಗೇಂದ್ರ ಪ್ರಸಾದ್, ಸೂರ್ಯ, ವಿ.ಮನೋಹರ್ ಹಾಗೂ ಪುನೀತ್ ಆರ್ಯ ಅವರ ಗೀತರಚನೆ 'ದಿಲ್ದಾರ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada