»   » ಸುದೀಪ್, ನಾರಾಯಣ್ 'ವೀರ ಪರಂಪರೆ'ಆರಂಭ

ಸುದೀಪ್, ನಾರಾಯಣ್ 'ವೀರ ಪರಂಪರೆ'ಆರಂಭ

Posted By:
Subscribe to Filmibeat Kannada

ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ವೀರ ಪರಂಪರೆ' ಚಿತ್ರಕ್ಕೆ ಶುಕ್ರವಾರ (ಮಾ.5) ಮುಂಜಾನೆ ಪೂಜಾ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ನಾರಾಯಣ್ ಅವರ ಬಸವೇಶ್ವರ ನಿವಾಸದಲ್ಲಿ ಇಂದು ಮುಂಜಾನೆ 5.30ರ ಶುಭ ಗಳಿಗೆಯಲ್ಲಿ ಪೂಜೆ ನಡೆಯಿತು. ಸುದೀಪ್ ಅವರ ತಾಯಿ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು.

ಸದ್ಯಕ್ಕೆ ಶಂಕರೇಗೌಡ ನಿರ್ಮಿಸಿ ಸುದೀಪ್ ನಿರ್ದೇಶಿಸುತ್ತಿರುವ 'ದಂಡಂ ದಶಗುಣಂ 'ಚಿತ್ರೀಕರಣ ನಡೆಯುತ್ತಿದೆ. ಅದಾದ ಕೂಡಲೆ ಏಪ್ರಿಲ್ 2ರಿಂದ 'ವೀರ ಪರಂಪರೆ' ರೆಗ್ಯುಲರ್ ಚಿತ್ರೀಕರಣ ನಡೆಯಲಿದೆ. ಸುದೀಪ್ ಜೊತೆಗೆ ಎಸ್ ನಾರಾಯಣ್ ಇದೇ ಮೊದಲ ಬಾರಿಗೆ ಮಾಡುತ್ತಿರುವ ಸಾಹಸ, ಸೆಂಟಿಮೆಂಟ್ ಪ್ರಧಾನ ಚಿತ್ರ ಇದಾಗಿದೆ. ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ಸುದೀಪ್, ಅಂಬರೀಶ್ ಜೊತೆಯಾಗಿ ನಟಿಸುತ್ತಿರುವುದು.'ನನ್ನವಳು ನನ್ನವಳು' ಚಿತ್ರ ಬಂದ ಹತ್ತು ವರ್ಷಗಳ ಬಳಿಕ ಛಾಯಾಗ್ರಾಹಕ ಗಿರಿ ಮತ್ತು ನಾರಾಯಣ್ ಈ ಚಿತ್ರದಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada