»   » ಬೆಳ್ಳಿತೆರೆಯ ಅಮ್ಮನಾಗಿ ಬಡ್ತಿ ಪಡೆದ ಖುಷಿಯಲ್ಲಿ ತಾರಾ

ಬೆಳ್ಳಿತೆರೆಯ ಅಮ್ಮನಾಗಿ ಬಡ್ತಿ ಪಡೆದ ಖುಷಿಯಲ್ಲಿ ತಾರಾ

Posted By:
Subscribe to Filmibeat Kannada

ನಟಿ ತಾರಾ ಅವರಿಗೆ ತಂಗಿ ಪಾತ್ರಗಳಿಂದ ಅಮ್ಮನ ಪಾತ್ರಕ್ಕೆ ಬಡ್ತಿ ಸಿಕ್ಕ ಬಗ್ಗೆ ಖುಷಿಯಾಗಿದೆಯಂತೆ. ಅವರು ತಾಯಿಯಾಗಿ ನಟಿಸಿದ 'ಜೊತೆಯಾಗಿ ಹಿತವಾಗಿ' ಚಿತ್ರದ ಪಾತ್ರ ಅವರಿಗೆ ಸಂತಸ ತಂದಿದೆಯಂತೆ. ಇಪ್ಪತ್ತು ಪ್ಲಸ್ ವರ್ಷದ ಮಗನಿಗೆ ತಾಯಿಯಾಗಿ ಈ ಚಿತ್ರದಲ್ಲಿ ತಾರಾ ಕಾಣಿಸಿದ್ದರು.

ಬೆಳ್ಳಿತೆರೆಯ ತಾಯಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಾರಾ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿನ ತಾಯಿಯ ಪಾತ್ರ ನನಗೆ ಕೇವಲ ಬಡ್ತಿಯನ್ನಷ್ಟೆ ಕೊಟ್ಟಿಲ್ಲ, ಉತ್ತಮ ಕಥಾ ಹಂದರವನ್ನು ಒಳಗೊಂಡ ಚಿತ್ರವಿದು ಎಂದಿದ್ದಾರೆ.

ಚಿತ್ರದಲ್ಲಿ ಹೊಸ ತಂತ್ರಜ್ಞರು ಇದ್ದಾರೆ. ಪ್ರೇಕ್ಷಕರು ತಮ್ಮ ಪಾತ್ರವನ್ನು ಮೆಚ್ಚಿದ್ದಾರೆ. 'ಜೊತೆಯಾಗಿ ಹಿತವಾಗಿ' ಎಂಬ ತಾಯಿಯ ಹಾಡು ಎಲ್ಲರ ಮನಗೆದ್ದಿದೆ ಎನ್ನುತ್ತಾರೆ ತಾರಾ. ಈ ಚಿತ್ರವನ್ನು ಶ್ರೀನಿವಾಸ್ ನಿರ್ದೇಶಿಸಿದ್ದರು. ತಾಯಿ ಪ್ರಧಾನವಾದ ಚಿತ್ರದಲ್ಲಿ ಚಂದನ್ ಮತ್ತ್ತು ತೇಜಸ್ವಿನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada