»   »  ಅದ್ದೂರಿಯಾಗಿ ರಾಕ್ ಲೈನ್ ಮಗನ ಮದುವೆ

ಅದ್ದೂರಿಯಾಗಿ ರಾಕ್ ಲೈನ್ ಮಗನ ಮದುವೆ

Subscribe to Filmibeat Kannada
Yateesh and Sinduri wedding
ರಾಕ್ ಲೈನ್ ವೆಂಕಟೇಶ್ ಮಗ ವಿ ಯತೀಶ್ ಮತ್ತು ಮುನಿರತ್ನ ನಾಯ್ಡು ಮಗಳು ಸಿಂಧೂರಿ ಗುರುವಾರ(ಏ.30) ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬೆಂಗಳೂರು ಅರಮನೆಯಲ್ಲಿ ಇವರಿಬ್ಬರ ಮದುವೆ ಅದ್ದೂರಿಯಾಗಿ ನಡೆಯಿತು. ನಿರ್ಮಾಪಕ ಕಮ್ ಬೆಂಗಳೂರು ರಸ್ತೆಗಳ ಗುತ್ತಿಗೆದಾರರು ಆಗಿರುವ ಮುನಿರತ್ನ ಅವರು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರವೇಶ ದ್ವಾರದಿಂದ ಬೆಂಗಳೂರು ಅರಮನೆವರೆಗೂ ರಸ್ತೆಗೆ ಹೊಸದಾಗಿ ಡಾಂಬರು ಹಾಕಿಸಿ ಅತಿಥಿಗಳಿಗೆ ಅದ್ದೂರಿ ಸ್ವಾಗತ ಕೋರಿದರು.

ಕನ್ನಡ ನಿರ್ಮಾಪಕದ್ವಯರ ಅದ್ದೂರಿ ಮದುವೆ ಕಾರ್ಯಕ್ರಮಕ್ಕೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ವಿಶೇಷ ಆಹ್ವಾನಿತರಾಗಿದ್ದರು. ಹೊಸ ದಂಪತಿಗಳಿಗೆ ರಜನಿಕಾಂತ್ ಶುಭ ಕೋರಿದರು. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ಗಣ್ಯರು ಮದುವೆ ಆಗಮಿಸಿದ್ದರು. ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಸೇರಿದಂತೆ ಹಲವಾರು ಗಣ್ಯರು ನವ ದಂಪತಿಗಳಿಗೆ ಶುಭ ಕೋರಿದರು.

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕನ್ನಡ ಚಿತ್ರರಂಗದ ತಾರೆಗಳಾದ ವಿ.ರವಿಚಂದ್ರನ್, ಪ್ರಕಾಶ್ ರೈ, ಸುಧಾರಾಣಿ, ಉಪೇಂದ್ರ, ಪುನೀತ್ ರಾಜ್ ಕುಮಾರ್, ಸುದೀಪ್, ದ್ವಾರಕೀಶ್, ರಾಘವೇಂದ್ರ ರಾಜ್ ಕುಮಾರ್, ವಿಜಯ್, ತಾರಾ ವೇಣು, ಯೋಗರಾಜ್ ಭಟ್, ಜೈ ಜಗದೀಶ್, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಾ ರಾ ಗೋವಿಂದು ಆಗಮಿಸಿದ್ದರು. ವಿ ಸೋಮಣ್ಣ, ಡಿ ಕೆ ಶಿವಕುಮಾರ್, ಆರ್ ಎನ್ ಸುದರ್ಶನ್ ಸೇರಿದಂತೆ ನಿರ್ದೇಶಕರಾದ ಸುರೇಶ್ ಕೃಷ್ಣ ಆಗಮಿಸಿದ್ದರು.

ಯತೀಶ್ ಮತ್ತು ಸಿಂಧೂರಿ ಮದುವೆಗೆ ಸರಿಸುಮಾರು ಹತ್ತು ಸಾವಿರ ಮಂದಿ ಆಗಮಿಸಿದ್ದರು. ಆಸ್ಟ್ರೇಲಿಯಾದಲ್ಲಿ ಎಂಬಿಎ ಶಿಕ್ಷಣ ಪಡೆದಿರುವ ಯತೀಶ್ ತಂದೆಯ ಏಕೈಕ ವಾರಸುದಾರ. ಪದವೀಧರೆಯಾದ ಸಿಂಧೂರಿ ಓದಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ:
ರಾಕ್ ಲೈನ್ ಮಗ ಮತ್ತು ಮುನಿರತ್ನ ಮಗಳ ಮದುವೆ
ಸದ್ದಿಲ್ಲದಂತೆ ರಾಕ್ ಲೈನ್ ಪುತ್ರನ ನಿಶ್ಚಿತಾರ್ಥ!
ರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು
ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada