»   »  ಪ್ರಿಯಾಮಣಿ ಸಂಭಾವನೆ ರು.40 ಲಕ್ಷ ನಿಜವೆ?

ಪ್ರಿಯಾಮಣಿ ಸಂಭಾವನೆ ರು.40 ಲಕ್ಷ ನಿಜವೆ?

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ರೊಂದಿಗಿನ ಚಿತ್ರಕ್ಕೆ ಪ್ರಿಯಾಮಣಿ ರು.40 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯನ್ನು ಆಕೆ ಅಲ್ಲಗಳೆದಿದ್ದಾರೆ. ಇನ್ನೂ ಹೆಸರಿಡದ ಗಣೇಶ್ ರೊಂದಿಗಿನ ಚಿತ್ರಕ್ಕೆ ತಾವು ಸಂಭಾವನೆ ಪಡೆದಿರುವುದು ನಿಜ. ಆದರೆ 40 ಲಕ್ಷ ರುಪಾಯಿ ಸಂಭಾವನೆ ಪಡೆದಿದ್ದೇನೆ ಎಂಬುದು ಕೇವಲ ವದಂತಿ ಎಂದು ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ.

ಆಕೆಯ ವೈಯಕ್ತಿಕ ಖರ್ಚು ವೆಚ್ಚಗಳು, ಸಂಭಾವನೆ ಸೇರಿದಂತೆ ಒಟ್ಟು ರು.40 ಲಕ್ಷ ಪ್ರಿಯಾಮಣಿಗೆ ಕೊಡಲಾಗಿದೆ ಎನ್ನಲಾಗಿತ್ತು. ಇಷ್ಟೊಂದು ಸಂಭಾವನೆ ಕೊಡಲು ನಿರ್ಮಾಪಕರು ಕೊಸರಾಡಿದರೂ ಕೊನೆಗೂ ಒಪ್ಪಿಕೊಂಡಿದ್ದರು.ಕನ್ನಡದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆ ಪ್ರಿಯಾಮಣಿ ಪಾಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇವೆಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿರುವ ಪ್ರಿಯಾಮಣಿ, ಕನ್ನಡದಲ್ಲಿ ಬೇರೆ ನಟಿಯರಿಗೆ ಸಂಭಾವನೆ ಎಷ್ಟು ಕೊಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಹಾಗಾಗಿ ಕನ್ನಡದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ನಾನೇ ಎಂದು ಹೇಗೆ ಹೇಳುವುದು ಎಂದು ಮರು ಪ್ರಶ್ನಿಸುತ್ತಾರೆ.

ಕಳೆದ ವರ್ಷ ಪ್ರಿಯಾಮಣಿ ನಟಿಸಿದ್ದ 'ಪರುಥಿ ವೀರನ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಪ್ರಶಸ್ತಿ, ಪುರಸ್ಕಾರಗಳು ಬಂದ ಮೇಲೆ ಸಂಭಾವನೆ ತಂತಾನೆ ಅಧಿಕವಾಗುತ್ತದೆ ಎನ್ನುವ ಪ್ರಿಯಾಮಣಿ, ಬಾಲಿವುಡ್ ನಲ್ಲೂ ಪಾದ ಊರಲು ಪ್ರಯತ್ನಿಸುತ್ತಿದ್ದಾರೆ. ಆಕೆ ಅಭಿನಯದ 'ರಾವಣ' ಚಿತ್ರ ಬಿಡುಗಡೆಯಾಗಬೇಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada