»   »  ಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್

ಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್

Posted By:
Subscribe to Filmibeat Kannada
B C Patil
ಶಾಸಕ ಬಿ.ಸಿ.ಪಾಟೀಲ್ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಹಿರೇಕೆರೂರಿನ ಸುಂದರ ಪರಿಸರದಲ್ಲಿ 'ಬಂದ ಬಂದ ಸೇವಕ ಇವನೇ ನಮ್ಮ ನಾಯಕ ಸೇವೆ ಇವನ ಕಾಯಕ ಎಂಬ ಗೀತೆಯ ಚಿತ್ರೀಕರಣ ನಡೆದಿದೆ. ರಾಂ ನಾರಾಯಣ್ ರಚನೆಯ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಬಿ.ಸಿ.ಪಾಟೀಲ್ ಹಾಗೂ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ನಂತರದ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ ಎಂದು ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರು, ಬೆಳಗಾಂ ಹಾಗೂ ಹಿರೇಕೆರೂರು ಮುಂತಾದೆಡೆಗಳಲ್ಲಿ ಚಿತ್ರಕ್ಕೆ ಹಗಲು ಇರುಳೆನ್ನದೆ ಚಿತ್ರೀಕರಣ ನಡೆಸಲಾಗಿದ್ದು ಕೇವಲ ೩೦ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರೀಕರಣ ವೇಗವಾಗಿ ಪೂರ್ಣವಾಗಲು ಸಹಕರಿಸಿದ ಚಿತ್ರತಂಡಕ್ಕೆ ನಿರ್ಮಾಪಕರು ಅಭಿನಂದನೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನೈಜ ಘಟನೆ ಆಧಾರಿತ ಪಾಟೀಲರ ಸಲ್ಯೂಟ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada