»   »  ಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ

ಉಪೇಂದ್ರ ಭೀಮೂಸ್... ವೆಬ್ ಸೈಟ್ ಗೆ ಚಾಲನೆ

Posted By:
Subscribe to Filmibeat Kannada
Bhimoos Bang Bang Kids website launched
ಸೂಪರ್ ಸ್ಟಾರ್ ಉಪೇಂದ್ರನಟನೆಯ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರದ ವೈಬ್ ಸೈಟ್ ಗೆ (www.b3kids.aol.in) ಚಾಲನೆ ನೀಡಲಾಗಿದೆ. ಎಓಎಲ್ ಕಂಪನಿ ರೂಪಿಸಿರುವೈಬ್ ಸೈಟ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಉಪಸ್ಥಿತರಿದ್ದರು. ಅನಾರೋಗ್ಯದ ಕಾರಣ ಉಪೇಂದ್ರ ಸಮಾರಂಭಕ್ಕೆ ಹಾಜರಾಗಲಿಲ್ಲ.

ವೆಬ್ ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಂಗ್ ಬಾಬು, ಸಾಫ್ಟ್ ವೇರ್ ಕಂಪನಿಗಳಲ್ಲಿ ಕನ್ನಡ ಭಾಷೆ ಬೆಳೆಯಬೇಕು. ನಮ್ಮ ಭಾಷೆ ಶ್ರೇಷ್ಠ ಎಂಬ ಭಾವನೆ ನಮ್ಮಲ್ಲಿ ಮೊದಲು ಮೂಡಬೇಕು. ನಮ್ಮಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞರು, ಕಲಾವಿದರು ಇದ್ದಾರೆ. ಹಿಂದಿಯ ಕ್ರಿಷ್ ನಂತಹ ಚಿತ್ರ ಮಾಡುವ ಸಾಮರ್ಥ್ಯ ನಮಗೂ ಇದೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂದರು.

ಉಪೇಂದ್ರ, ರಮ್ಯಾ ಹಾಗೂ ನಾಲ್ವರು ಬಾಲ ಕಲಾವಿದರನ್ನು ಒಳಗೊಂಡ ಚಿತ್ರ ಭೀಮೂಸ್...ಈ ಚಿತ್ರದಲ್ಲಿ ಒಂದು ಅನಿಮೇಟೆಡ್ ಪಾತ್ರವನ್ನು ಸೃಷ್ಟಿಸಲಾಗಿದೆ. ಇದೊಂದು ದೇಶಪ್ರೇಮ ಬಿಂಬಿಸುವ ಚಿತ್ರ. ಭಯೋತ್ಪಾದಕರೊಂದಿಗಿನ ಹೋರಾಟ ಚಿತ್ರದಲ್ಲಿದೆ. ಖಂಡಿತವಾಗಿಯೂ ಈ ಚಿತ್ರ ಪ್ರೇಕ್ಷಕರ ಹೃದಯ ಗೆಲ್ಲುತ್ತ್ತದೆ ಎನ್ನುತ್ತಾರೆ ಸಿಂಗ್ ಬಾಬು.

(ದಟ್ಸ್ ಕನ್ನಡ ಚಿತ್ರವಾರ್ತೆ)
ಉಪೇಂದ್ರ ಭೀಮೂಸ್ ಧ್ವನಿ ಸುರುಳಿ ಬಿಡುಗಡೆ
ರಮ್ಯಾ ಮತ್ತು ಬಾಬು ನಡುವೆ ಬ್ಯಾಂಗ್ ಬ್ಯಾಂಗ್!
ಖೇಣಿ ರೋಡಲ್ಲಿ ಅಂಬಿ-ಭೀಮು-ಬಾಬು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada