»   »  ಶತಕ ಪೂರೈಸಿದ ಉಪೇಂದ್ರನ ಬುದ್ಧಿವಂತ

ಶತಕ ಪೂರೈಸಿದ ಉಪೇಂದ್ರನ ಬುದ್ಧಿವಂತ

Subscribe to Filmibeat Kannada

ಪೂಜಾಗಾಂಧಿ,ಸುಮನ್ ರಂಗನಾಥ್,ನೇತಾನ್ಯಾ,ಸಲೋನಿ ಮತ್ತು ಬೃಂದಾ ಎಂಬ ಪಂಚ ನಟಿಯರೊಂದಿಗೆ ಸೂಪರ್ ಸ್ಟಾರ್ ಉಪೇಂದ್ರ ನಟಿಸಿರುವ 'ಬುದ್ಧಿವಂತ' ಚಿತ್ರ 100ದಿನಗಳನ್ನು ಪೂರೈಸಿದೆ. ಕರ್ನಾಟಕದಾದ್ಯಂತ 25ಕ್ಕೊ ಹೆಚ್ಚು ಚಿತ್ರಮಂದಿರಗಳಲ್ಲಿ ಬುದ್ಧಿವಂತ ಪ್ರದರ್ಶನಗೊಳ್ಳುತ್ತಿದ್ದಾನೆ. ಚಿತ್ರದಲ್ಲಿನ ಹಾಡುಗಳು ಮತ್ತು ಮನರಂಜನೆ ಪ್ರೇಕ್ಷಕರ ಮನಗೆದ್ದಿದೆ. ಕನ್ನಡ ಚಿತ್ರರಂಗದಲ್ಲಿ ತನ್ನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎಂಬುದನ್ನು ಉಪೇಂದ್ರ ಸಾಬೀತು ಪಡೆಸಿದ್ದಾರೆ.

ಗಾಂಧಿನಗರದ ಲೆಕ್ಕಾಚಾರ ನಿಜವೇ ಆಗಿದ್ದರೆ ಬುದ್ಧಿವಂತ ಬಾಕ್ಸಾಫೀಸಿನಲ್ಲಿ 15 ಕೋಟಿ ರು.ಗಳಿಗೂ ಹೆಚ್ಚು ಹಣ ಗಳಿಸಿದ್ದಾನೆ. ಬುದ್ಧಿವಂತನ ಯಶಸ್ಸಿನಿಂದ ನಿರ್ಮಾಪಕರಾದ ಎ.ಮೋಹನ್ ಮತ್ತ್ತು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮತ್ತು ನಿರ್ದೇಶಕ ರಾಮನಾಥ್ ಖುಷಿಯಾಗಿದ್ದಾರೆ. ಚಿತ್ರ ಈ ಪಾಟಿ ಗೆಲ್ಲುತ್ತೆ ಅಂಥ ಸ್ವತಃ ಉಪೇಂದ್ರ ಸಹ ಊಹಿಸಿರಲಿಲ್ಲ. ಬುದ್ಧಿವಂತ ಮತ್ತೊಂದು ರಕ್ತ ಕಣ್ಣೀರು ಆಗಿ ಉಪೇಂದ್ರ ಅವರಿಗೆ ಪುನರ್ಜನ್ಮ ನೀಡಿದೆ.

ವಿಜಯ್ ಆಂತೋನಿ ಅವರ ಸಂಗೀತ ಸಹ ಚಿತ್ರದ ಪ್ರಮುಖ ಅಕರ್ಷಣೆಯಾಗಿತ್ತು. ಒಟ್ಟಿನಲ್ಲಿ ಬುದ್ಧಿವಂತನ ಮ್ಯಾಜಿಕ್ ಗೆದ್ದಿದೆ. ಜನವರಿ 9ರಂದು 'ಕೆಂಪ' ಬರುತ್ತಿದ್ದಾನೆ.ನರ್ತಕಿ ಚಿತ್ರಮಂದಿರವನ್ನು ಕೆಂಪನಿಗಾಗಿ ಬುದ್ಧಿವಂತ ಜಾಗ ಬಿಟ್ಟುಕೊಡುತ್ತಿದ್ದಾನೆ. ಆನೇಕಲ್ ಬಾಲರಾಜ್ ತಮ್ಮ ಪುತ್ರ ಸಂತೋಷ್ ಅವರನ್ನು ಕೆಂಪನ ಮೂಲಕ ಹೀರೋ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ತನುಷ್ಕಾ.

ಉಪೇಂದ್ರ ನಟನೆಯ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.ಇನ್ನೂ ಹೆಸರಿಡದ ಉಪೇಂದ್ರರ ಚಿತ್ರ ಸೆಟ್ಟೇರಿದೆ. ಆ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಉಪೇಂದ್ರ ಅವರದು. ಆದಕಾರಣ ಪ್ರೇಕ್ಷಕ ವಲಯದಲ್ಲಿ ಸಹಜವಾಗಿಯೇ ಕುತೂಹಲ ಮನೆಮಾಡಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೆನ್ಸಾರ್ ಮಂಡಳಿಯ ಅಡಕತ್ತರಿಯಲ್ಲಿ ಬುದ್ಧಿವಂತ!
ಬುದ್ಧಿವಂತ : 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada