»   » ಬೆಳ್ಳಿಯಲ್ಲಿ ಅರಳಿದ ಬಂಗಾರದ ಮನುಷ್ಯ

ಬೆಳ್ಳಿಯಲ್ಲಿ ಅರಳಿದ ಬಂಗಾರದ ಮನುಷ್ಯ

Posted By:
Subscribe to Filmibeat Kannada

ಅಣ್ಣಾವ್ರಿಗೆ ತುಮಕೂರಿನ ಅಭಿಮಾನಿ ದೇವರುಗಳು ಬೆಳ್ಳಿಯ ವಿಗ್ರಹ ಮಾಡಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಅಭಿಮಾನಿ ದೇವರುಗಳು ಈ ಸಾಹಸ ಮಾಡಿದ್ದಾರೆ. ಒಟ್ಟು 6.35 ಕೆ.ಜಿ ತೂಕದ ಬೆಳ್ಳಿ ವಿಗ್ರ ವಿಗ್ರಹಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಖರ್ಚಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ 'ಮೈಲಾರಿ' ಸೆಟ್ಟೇರಿದ ಪ್ರಯುಕ್ತ ಅಣ್ಣಾವ್ರ ಬೆಳ್ಳಿ ವಿಗ್ರಹವನ್ನು ಅಭಿಮಾನಿಗಳು ಪ್ರದರ್ಶಿಸಿದರು. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಬಂಗಾರದ ಮನುಷ್ಯನ ಬೆಳ್ಳಿ ವಿಗ್ರಹವಿಟ್ಟು ಸಂಭ್ರಮಿಸಿದರು. ನಾಕೋಡ್ ಕಮಲೇಶ್ ಎಂಬ ಲೋಹ ಶಿಲ್ಪಿ ಈ ವಿಗ್ರಹವನ್ನು ಸುಂದರವಾಗಿ ರೂಪಿಸಿದ್ದಾರೆ.

ಅಣ್ಣಾವ್ರ ಬೆಳ್ಳಿವಿಗ್ರಹವನ್ನು ನೋಡಿದ ಶಿವಣ್ಣ ಒಂದೆರಡು ಕ್ಷಣ ಭಾವುಕರಾದರು. ಅಭಿಮಾನಿಗಳ ಅಭಿಮಾನಕ್ಕೆ ಶಿವಣ್ಣ ಶಿರಬಾಗಿದರು. ಏಪ್ರಿಲ್ 24ರ ಅಣ್ಣಾವ್ರ ಹುಟ್ಟುಹಬ್ಬದಂದು ಈ ಬೆಳ್ಳಿ ವಿಗ್ರಹವನ್ನು ಶತಶೃಂಗರಾಜ ರಾಜ್ ಅಭಿಮಾನಿಗಳ ಸಂಘ ತುಮಕೂರಿನಲ್ಲಿ ಪ್ರತಿಷ್ಠಾಪಿಸಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada