For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ತಮ್ಮ ಮಹೇಶ್ ಈಗ 'ಅಲೆಮಾರಿ'

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಹೇಶ್ ಈಗ 'ಅಲೆಮಾರಿ'! ಅಣ್ಣನಂತೆ ತಾನೂ ಚಿತ್ರರಂಗಕ್ಕೆ ಅಡಿಯಿಟ್ಟು ಬೆಳ್ಳಿಪರದೆ ಮೇಲೆ ಮಿನುಗಬೇಕು ಎಂಬುದು ಮಹೇಶ್ ಅವರ ಕನಸಾಗಿತ್ತು. ಸುದೀರ್ಘ ಎರಡುವರೆ ವರ್ಷಗಳ ಬಳಿಕ ಅವರ ಕನಸು 'ಅಲೆಮಾರಿ'ಯಾಗಿ ನೆರವೇರಿದೆ.

  ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಮಹೇಶ್ ಕುಮಾರ್. ಮಹೇಶ್ ಸಾಕಷ್ಟು ತರಬೇತಿಯನ್ನು ಪಡೆದು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಅಣ್ಣ ಗಣೇಶನನ್ನು ಕನ್ನಡ ಚಿತ್ರರಸಿಕರು ಆಶೀರ್ವದಿಸಿದಂತೆ ತಮ್ಮನನ್ನೂ ಆಶೀರ್ವದಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.

  ಅಲೆಮಾಮ್ರಿ ಚಿತ್ರವನ್ನು ಅಗ್ರಹಾರ ಚಿತ್ರವನ್ನು ನಿರ್ಮಿಸಿದ್ದ ಗಜೇಂದ್ರ ನಿರ್ಮಿಸುತ್ತಿದ್ದಾರೆ. ಜನವರಿ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ. ಲವ್, ಆಕ್ಷನ್, ಕಾಮಿಡಿ ಅಂಶಗಳು ಚಿತ್ರದಲ್ಲಿರುತ್ತವಂತೆ. ಬಳ್ಳಾರಿ, ಸಂಡೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

  ಗುಜರಾತಿ ಬೆಡಗಿ ರಿಷಿಕಾ ಚೌದರಿ ಚಿತ್ರದ ನಾಯಕಿ. ಉಳಿದಂತೆ ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣ ರಘು ಸೇರಿದಂತೆ ಮುಂತಾದವರು ಇದ್ದಾರೆ. ಪ್ರದೀಪ್ ರಾವತ್ ಖಳನಟನಾಗಿ ಕಾಣಿಸಲಿದ್ದಾರೆ. ಹಿರಿಯ ಕಲಾವಿದರೊಬ್ಬರು ಮಹೇಶ್ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ.

  English summary
  Golden Star Ganesh sibling Mahesh movie named as Alemari. Mahesh Kumar is the director of the movie Alemari. Gajendra is producing the movie. Previously he produced "Agrahara" Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X